67
ಕುಂದಾಪುರ :ಜೆ ಸಿ ಐ ಕುಂದಾಪುರದ ಜೂನಿಯರ್ ಜೆಸಿ ವಿಭಾಗದಿಂದ ಕುಂದಾಪುರ ನಗರದ ಆಟೋರಿಕ್ಷಾ ಚಾಲಕರಿಗೆ ಪ್ರಥಮ ಚಿಕಿತ್ಸಾ ಕಿಟ್ ನೀಡಲಾಯಿತು .
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಜೆ ಸಿ ಐ ಕುಂದಾಪುರದ ಪೂರ್ವ ಅಧ್ಯಕ್ಷ ರತ್ನಾಕರ್ ಕುಂದಾಪುರದ ಪ್ರಥಮ ಚಿಕಿತ್ಸಾ ಕಿಟ್ ನ್ನು ಆಟೋ ಯೂನಿಯನ್ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕುಂದಾಪುರ ಜೆ ಸಿ ಅಧ್ಯಕ್ಷ ಸುಬ್ರಹ್ಮಣ್ಯ ಆಚಾರ್ , ಜೂನಿಯರ್ ಜೆಸಿ ಅಧ್ಯಕ್ಷ ರತ್ವಿಕ್ ರತ್ನಾಕರ್ ಉಪಾಧ್ಯಕ್ಷರಾದ ರಾಕೇಶ್ ಶೆಟ್ಟಿ ,ಪುಷ್ಪಲತಾ ಆರ್, ಖಜಾಂಚಿ ಚೇತನ್ ದೇವಾಡಿಗ ಹಾಗೂ ಜೂನಿಯರ್ ಜೆಸಿ ಸದಸ್ಯರು, ಆಟೋ ಡ್ರೈವರ್ ಉಪಸ್ಥಿತರಿದ್ದರು

