Home » ಕಾರ್ಕಳ ಪ್ರತಿಭಟನೆ : ಕೊಡ್ಗಿ ಭಾಗಿ
 

ಕಾರ್ಕಳ ಪ್ರತಿಭಟನೆ : ಕೊಡ್ಗಿ ಭಾಗಿ

by Kundapur Xpress
Spread the love

ಕಾರ್ಕಳ :  ಕಾರ್ಕಳದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಬೆಲೆ ಏರಿಕೆ, ಬಿಪಿಎಲ್ ಕಾರ್ಡ್ ರದ್ದು, ಕೃಷಿಕರಿಗೆ ಅನ್ಯಾಯ ಸೇರಿದಂತೆ ಕಾಂಗ್ರೆಸ್ ಸರಕಾರದ ಅನೇಕ ಜನವಿರೋಧಿ ನೀತಿಯನ್ನು ಖಂಡಿಸಿ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಆಯೋಜಿಸಿಲಾದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಭಾಗವಹಿಸಿದರು.
ಈ ಪ್ರತಿಭಟನೆಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ನವೀನ್ ನಾಯಕ್ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್, ಹಾಗೂ ಜಿಲ್ಲಾ ಬಿಜೆಪಿಯ ವಿವಿಧ ಪ್ರಮುಖರು ವಿವಿಧ ಮಂಡಲದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು

 

Related Articles

error: Content is protected !!