ಬೈಂದೂರು : ಇಷ್ಟು ದಿನ ಎಲ್ಲವನ್ನೂ ಸಹಿಸುತ್ತಾ ಬಂದ ಈ ಈಶ್ವರಪ್ಪ ರಾಜ್ಯ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣವನ್ನು ಕೊನೆಗಾಣಿಸುವ ತನಕ ವಿರಮಿಸು ವುದಿಲ್ಲ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ಅವರು ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಉಪ್ಪುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದೂ ಕಾರ್ಯಕ ರ್ತರಿಗೆ ವಂಚಿಸಲಾಗುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಹೊಂದಾಣಿಕೆ ರಾಜಕೀಯದ ಮೂಲಕ ತನ್ನ ಕುಟುಂಬ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪನವರಷ್ಟೇ ಈ ಈಶ್ವರಪ್ಪನೂ ಕೆಲಸ ಮಾಡಿದ್ದಾನೆ ಎನ್ನುವುದನ್ನು ಯಾವ ಕಾರ್ಯಕರ್ತರೂ ಮರೆತಿಲ್ಲ. ಕೇವಲ ತಮ್ಮ ಸ್ವಾರ್ಥ ರಾಜಕೀಯ, ಕುಟುಂಬ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಯಡಿಯೂರಪ್ಪನವರ ವಿರುದ್ದ ನನ್ನ ಹೋರಾಟ ಎಂದರು
ಈ ಚುನಾವಣೆ ಕೇವಲ ಚುನಾವಣೆಯಲ್ಲ, ಇದು ಹಣ ಬಲ ಮತ್ತು ದೇಶಭಕ್ತಿಯ ನಡುವಣ ಸಮರ. ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವೆ ಎಂದ ಅವರು, ನಾನು ಕಾರ್ಯಕರ್ತರ ಜೊತೆಗಿರುವೆ. ಕಾರ್ಯಕರ್ತರೂ ನನ್ನ ಕೈಬಿಡುವುದಿಲ್ಲ ಎಂದರು. ಶಿವಮೊಗ್ಗದಲ್ಲಿ ಏ. 12ರಂದು ನಾಮಪತ್ರಲ್ಲಿಕೆ ಮಾಡಲಿದ್ದೇನೆ. ಆ ದಿನ 20 ಸಾವಿರ ಜನ ಸೇರುವ ನಿರೀಕ್ಷೆ ಇದೆ ಪಕ್ಷ ಭೇದ ಮರೆತು ಜನ ಬರಲಿದ್ದಾರೆ ಎಂದರು.ಈಶ್ವರಪ್ಪ ಪುತ್ರ ಕಾಂತೇಶ್, ಮುಖಂಡರಾದ ಶ್ರೀಧರ ಬಿಜೂರು, ಕೊಲ್ಲೂರು ದೇವಳದ ವ್ಯವ ಸ್ಥಾಪನಾ ಸಮಿತಿ ಮಾಜಿ ಸದಸ್ಯ ಗೋಪಾಲ ನಾಡ, ಸುವರ್ಣ ಪೂಜಾರಿ, ಮೀನುಗಾರ ಮುಖಂಡ ಯಶವಂತ ಗಂಗೊಳ್ಳಿ ಉಪಸ್ಥಿತರಿದ್ದರು.