ಕುಂದಾಪುರ : ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ವತಿಯಿಂದ 2ನೇ ವರ್ಷದ ‘ಲಗೋರಿ’ ಗ್ರಾಮೀಣ ಕ್ರೀಡಾಕೂಟ ಜು.20ರಂದು ಆದಿತ್ಯವಾರ ಕುಂದಾಪುರ ಬೋರ್ಡ್ ಹೈಸ್ಕೂಲು ಮೈದಾನದಲ್ಲಿ ಜರುಗಲಿದೆ
ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಭಾಷೆಯ ಹೆಸರಿನಲ್ಲಿ ಕ್ರೀಡಾಕೂಟ ಆಯೋಜಿಸುತ್ತಿದೆ. ತೆರೆಯ ಮರೆಗೆ ಸರಿಯುತ್ತಿರುವ ಗ್ರಾಮೀಣ ಆಟಗಳನ್ನು ಮತ್ತೆ ಮುನ್ನೆಲೆಗೆ ತರುವುದು ಈ ಕೂಟದ ಉದ್ದೇಶವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದರು.
ಅವರು ಕಲಾಕ್ಷೇತ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕರ್ಕಾಟಕ ಅಮವಾಸ್ಯೆ ದಿನದಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಬೇಕೆಂಬ ಇಂಗಿತವನ್ನು ಕುಂದಾಪ್ರ ಕನ್ನಡದ ಭಾಷಾಭಿಮಾನಿಗಳು ವ್ಯಕ್ತಪಡಿಸಿದ್ದರು. ಅಂದಿನಿಂದ ಜಗತ್ತಿನಾದ್ಯಂತ ಕುಂದಾಪುರ ಭಾಷಿಕರು ಆ ದಿನವನ್ನು ಆಚರಣೆ ಮಾಡಲಾರಂಭಿಸಿ ಕುಂದಾಪುರ ಕನ್ನಡದ ಭಾಷಾಭಿಮಾನ ಗಮನಾರ್ಹವಾಗಿ ಹೆಚ್ಚಾಗಿದೆ. ಕಲಾಕ್ಷೇತ್ರ ಈ ಹಿನ್ನೆಲೆಯಲ್ಲಿ ಇಂದಿನ ಜನಾಂಗ ನೋಡದ ಮತ್ತು ಆಡದ ಆಟಗಳನ್ನು ಭಾಷಾ ಪ್ರೇಮಿಗಳನ್ನು ಒಗ್ಗೂಡಿಸಿ ಆಡಿಸುತ್ತಿದ್ದೇವೆ. ತೆರೆಯ ಮರೆಗೆ ಸರಿದ ಕ್ರೀಡೆಯನ್ನು ಮತ್ತೆ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಶಾಸಕ ಕಿರಣ್ – ಕುಮಾರ್ ಕೊಡ್ಲಿ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಮತ್ತು – ಇತರ ಗಣ್ಯರಿಗೆ ಆಹ್ವಾನ ನೀಡಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಲಾಕ್ಷೇತ್ರ ಸಂಸ್ಥೆಯ ಕೆ.ಆರ್. ನಾಯ್ಕ, ದಾಮೋದರ ಪೈ ಗೋಪಾಲ್ ಪೂಜಾರಿ, ಡಾ। ರಾಜಾರಾಮ ಶೆಟ್ಟಿ ಪ್ರವೀಣ್ ಚಂದ್ರ ಶೆಟ್ಟಿ ಜಾಯ್ ಕರ್ವಾಲೊ, ಕಮಲ್ ಕಿಶೋರ್, ರಾಜೇಶ್ ಕಾವೇರಿ, ರಾಮಚಂದ್ರ, ಸಾಯಿನಾಥ ಶೇಟ್, ಪ್ರವೀಣ್ ಕುಮಾರ್, ಶ್ರೀಧರ ಸುವರ್ಣ ಉಪಸ್ಥಿತರಿದ್ದರು.

