Home » ಕಾರ್ಕಡ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ
 

ಕಾರ್ಕಡ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬ

by Kundapur Xpress
Spread the love

ಕೋಟ: ಸಾಲಿಗ್ರಾಮ ಪಟ್ಟಣಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಡ ಇಲ್ಲಿ ಕಾರ್ಕಡ ಕ್ಲಸ್ಟರ್ ಮಟ್ಟದ ಶಾಲಾ ಮಕ್ಕಳ ಕಲಿಕಾ ಹಬ್ಬ -2025 ಕಾರ್ಯಕ್ರಮ ಮಂಗಳವಾರ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಪೇಟೆ ವಾರ್ಡ್ ಸದಸ್ಯೆ ರತ್ನಾನಾಗರಾಜ್ ಗಾಣಿಗ ಅಧ್ಯಕ್ಷತೆ ವಹಿಸಿ ಉದ್ಘಾಟಿಸಿದರು.
ಕಲಿಕಾ ಹಬ್ಬದ ಅಂಗವಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ಸುರೇಶ್ ಕುಂದರ್ ಮಕ್ಕಳಿಗೆ ಕಿರೀಟ ತೊಡಿಸಿ ಚಾಲನೆ ನೀಡಿ ಮಾತನಾಡಿ ಬುನಾದಿ ಸಾಮರ್ಥ್ಯ ಗಣಿತ ಕಲಿಕೆಯನ್ನು ಸೇರಿದಂತೆ ವಿವಿಧ ಸ್ತರದ ಶೈಕ್ಷಣಿಕ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ಗಟ್ಟಿಗೊಳಿಸಲು ಈ ಕಲಿಕಾ ಹಬ್ಬ ಸಹಕಾರಿ ಶಿಕ್ಷಣ ಇಲಾಖೆ ಇಂಥಹ ಕಾರ್ಯಕ್ರಮಗಳ ಮೂಲಕ ಪೋಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಸಮನ್ವಯತೆ ಹಾಗೂ ಪ್ರತಿಭಾ ಅನ್ವೇಷಣೆಗೆ ಸಹಕಾರಿ ಹಾಗೂ ಈ ರೀತಿಯ ಹಲವು ಬಗೆಯ ಕಾರ್ಯಕ್ರಮಗಳನ್ನು ಇಲಾಖೆ ಹಮ್ಮಿಕೊಳ್ಳುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಳಶ ಹಿಡಿದು ತರಗತಿ ಕೊಠಿಡಿ ಮೂಲಕ ಸಭೆಗೆ ಆಗಮಿಸಿ ಶಿಕ್ಷಕರನ್ನು ಹಾಗೂ ಪೋಷಕರನ್ನು ಬರಮಾಡಿಕೊಂಡರು.
ಶಾಲೆಯ ಏಳು ಕೊಠಡಿಗಳನ್ನು ವಿವಿಧ ರೀತಿಯಲ್ಲಿ ಶೃಂಗರಿಸಿದ್ದು ಒಂದು ಸೇಲ್ಫಿ ಕೌಂಟರ್ ಅಳವಡಿಸಿ ಗಮನ ಸೆಳೆಯಿತು.
ಈ ಕಲಿಕಾ ಹಬ್ಬದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಶಾಲೆಗಳ ಶಿಕ್ಷಕರಾದ ವಾಣಿ,ವಿಜಯ ಕುಮಾರ್ ರ್ಪಾರ್ವತಿ,ಕಸ್ತೂರಿ,ಪುಷ್ಭಲತಾ,ಸುಶೀಲ ಇವರುಗಳನ್ನು ನೇಮಕಗೊಳಿಸಲಾಯಿತು.
ಕಲಿಕಾ ಸಭೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ತಿಲೋತ್ತಮೆ ನಾಯಕ್,ಶಾಲಾ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರುಳಿಧರ ನಾಯರಿ,ಶಾಲಾ ಎಸ್ ಡಿ ಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ,ಉಪಾಧ್ಯಕ್ಷೆ ಅನ್ನಪೂರ್ಣ ಉಪಸ್ಥಿತರಿದ್ದರು. ಶಾಲಾಮುಖ್ಯ ಶಿಕ್ಷಕಿ ಜ್ಯೋತಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಕಡ ಕ್ಲಸ್ಟರ್ ವಿಭಾಗದ ಸಿಆರ್ ಪಿ ಸವಿತಾ ಆಚಾರ್ ವಂದಿಸಿದರೆ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಬೇಬಿ ನಿರೂಪಿಸಿದರು

 

Related Articles

error: Content is protected !!