ಕೋಟ: ಕೋಟ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಕಟ್ಟಡದಲ್ಲಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಆಶ್ರಯದಲ್ಲಿ ಮಳೆಗಾಲ ದಿನ ಹಾಡು ಕತೆಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.
ಗಾಯಕಿ ಶ್ರೀಮತಿ ಭಾಗ್ಯೇಶ್ವರಿ ಮಯ್ಯ ಮತ್ತು ಕುಮಾರಿ ವಿಧಾತ್ರಿ ಮಯ್ಯ ಅವರಿಂದ ಮಳೆಯ ಕುರಿತ ಹಾಡುಗಳ ಗಾಯನ ,ದ ರಾ ಬೇಂದ್ರೆ, ಎಚ್.ಎಸ್ ವೆಂಕಟೇಶ ಮೂರ್ತಿ, ಕುವೆಂಪು, ಅವರ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಗಣ್ಯರಾದ ಶ್ರೀನಿವಾಸ ಅಡಿಗ ತೆಕ್ಕಟ್ಟೆ, ನರೇಂದ್ರ ಕುಮಾರ್ ಕೋಟ, ಕುಚ್ಚೂರು ಲಕ್ಷೀ ಜಿ ಭಟ್, ಸುಮನ ಹೇರ್ಳೆ, ನೀಲಾವರ ಸುರೇಂದ್ರ ಅಡಿಗ,ಉಪೇಂದ್ರ ಸೋಮಯಾಜಿ, ವಾಣಿಶ್ರೀ ಅಡಿಗ , ಸವಿತಾ ಶಾಸ್ರೀ ಮೊದಲಾದವರು ಮಳೆಯ ಕುರಿತಯ ತಾವು ಬರೆದ ಕಥೆ, ಕವನ, ಹಾಡು ಹಾಗೂ ಅನುಭವಗಳನ್ನು ಹಂಚಿಕೊಂಡರು.
ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವಿದ್ಯಾರ್ಥಿ ಪ್ರತಿನಿಧಿ ಗಳಾದ ಅವನೀಶ ಐತಾಳ ಪಿ,ಅಂಶು ಡಿ, ಭೂಮಿಕಾ, ಶರ್ಮಿಳಾ, ಮಾನಸ,ಶ್ರೇಯಾ,ಭೂಮಿ, ಶ್ರೀಶಾಂತ ತಮ್ಮ ಸ್ವರ ಚಿತ ಕವನ ವಾಚಿಸಿದರು.ಕಸಾಪ ಜಿಲ್ಲಾ ಗೌರವ ಕಾರ್ಯ ದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸಮನ್ವಯದ ಕುರಿತು ಮಾತ ನಾಡಿದರು. ಇದೇ ವೇಳೆ ಪಾರಂಪಳ್ಳಿಯಲ್ಲಿ ಇತ್ತೀಚಿಗೆ ಪಾರಂಪಳ್ಳಿ ನರಸಿಂಹ ಐತಾಳರ ಸರ್ವಾಧ್ಯಕ್ಷತೆಯಲ್ಲಿ ನಡೆದ ಬ್ರಹ್ಮಾವರ ತಾಲೂಕು ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ತಾಲೂಕು ಕಸಾಪ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳರನ್ನು ಗೌರವಿಸಲಾಯಿತು.
ಮುಖ್ಯ ಅಭ್ಯಾಗತರಾಗಿ ಡಾ.ಉಮೇಶ್ ಭಟ್, ನರಸಿಂಹ ಮೂರ್ತಿ ರಾವ್ , ಜನಾರ್ದನ ಕೊಡವೂರು, ಪೂರ್ಣಿಮಾ ಜನಾರ್ದನ, ಮನೋಹರ ಪಿ,ಕಮಲ ಮಯ್ಯ, ಶ್ರೀದೇವಿ ಹಂದೆ, ವಿಜಯಲಕ್ಷ್ಮಿ, ಸತೀಸ್ ವಡ್ಡರ್ಸೆ ಉಪಸ್ಥಿತರಿದ್ದರು.
ವಿಧಾತ್ರಿ, ಭಾಗ್ಯೇಶ್ವರಿ ಮಯ್ಯ ಪಾರ್ಥನೆ ಮಾಡಿದರು. ಉಪೇಂದ್ರ ಸೋಮಯಾಜಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮಹಾಲಕ್ಷ್ಮಿ ಸೋಮಯಾಜಿ ವಂದಿಸಿದರು. ಮಾನಸ ನಿರೂಪಿಸಿದರು.