ಕುಂಭಾಸಿ : ಕಾಂತಾರ-2 ಚಿತ್ರದ ಮೊದಲ ಅಧ್ಯಾಯಕ್ಕೆ ನಿನ್ನೆ ಮುಹೂರ್ತ ನಡೆದಿದೆ. ಕುಂದಾಪುರದ ಕುಂಭಾಸಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರತಂಡ ವಿಶೇಷ ಪೂಜೆಯನ್ನ ಸಲ್ಲಿಸಿ ಉದ್ಭವಮೂರ್ತಿ ವಿನಾಯಕ ದೇವರಿಗೆ ಮೂಡು ಗಣಪತಿ ಸೇವೆ, ತ್ರಿಕಾಲ ಸೇವೆ ಅನ್ನದಾನ ಸೇವೆ ನಡೆಸುತು.ಈ ಸಂದರ್ಭದಲ್ಲಿ ದೇವಾಲಯವನ್ನು ವಿಶೇಷವಾಗಿ ವಿಧ ವಿಧದ ಹೂವುಗಳಿಂದ ಶೃಂಗರಿಸಲಾಗಿತ್ತು

ಇತ್ತೀಚಿಗಷ್ಟೇ ಸಿನಿಮಾ ಮುಹೂರ್ತದ ಕುರಿತಂತೆ ಪಂಜುರ್ಲಿ ಮತ್ತು ಗುಳಿಗ ದೈವಕ್ಕೆ ಚಿತ್ರತಂಡ ಮೊರೆ ಹೋಗಿದ್ದು, ದೈವಗಳು ಅಸ್ತು ಎಂದಿವೆ ಎನ್ನುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸಿನಿಮಾ ತಂಡ ಮುಹೂರ್ತಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿತ್ತು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ-2. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರಲಿದ್ದು ಸಿನಿಮಾವು ಬರೋಬ್ಬರಿ ಏಳು ಭಾಷೆಗಳಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ
ಸಿನಿಮಾ ಮೂಹೂರ್ತದ ಕಾರ್ಯಕ್ರಮದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮಧರ್ಶಿ ಶ್ರೀ ಕೆ ರಮಣ ಉಪಾಧ್ಯಾಯ ಕೆ ವಿಠಲ ಉಪಾಧ್ಯಾಯ ನಿರಂಜನ್ ಉಪಾಧ್ಯಾಯ ಹಾಗೂ ಮಾಜಿ ಹಿರಿಯ ಧರ್ಮಧರ್ಶಿಗಳಾದ ಕೆ ಸೂರ್ಯನಾರಾಯಣ ಉಪಾಧ್ಯಾಯ ಪರ್ಯಾಯ ಅರ್ಚಕರಾದ ಶ್ರೀ ಶ್ರೀಶ ಉಪಾಧ್ಯಾಯ ದೇವಾಲಯದ ಮೆನೇಜರ್ ನಟೇಶ್ ಕಾರಂತ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮಧರ್ಶಿಗಳಾದ ಕೆ ರಮಣ ಉಪಾಧ್ಯಾಯರವರು ರಿಷಭ್ ಶೆಟ್ಟಿ ದಂಪತಿಗೆ ಶ್ರೀ ದೇವರ ಪ್ರಸಾದವನ್ನು ನೀಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು

