76
ಕಾಪು : *ಹಿನಸ್ತಿ ದೈತ್ಯ ತೇಜಾಂಸಿ ಸ್ವನೇನಾಪೂರ್ಯಯಾ ಜಗತ್ |
ಸಾ ಘಂಟಾ ಪಾತು ನೋ ದೇವಿ ಪಾಪೇಭ್ಯೋ ನಃ ಸುತಾನಿವ *
ತಾತ್ಪರ್ಯ :
*ಹೇ ದೇವಿಯೇ। ಯಾವ ನಿನ್ನ ಘಂಟೆಯು ತನ್ನ ಧ್ವನಿಯಿಂದ ಇಡೀ ಪ್ರಪಂಚವನ್ನೇ ತುಂಬಿಸಿ, ದುಷ್ಟ ಶಕ್ತಿಗಳ ತೇಜಸ್ಸನ್ನು ನಾಶ ಮಾಡುತ್ತದೋ ಅಂತಹ ಘಂಟೆಯ ಶಬ್ದವು ಮಕ್ಕಳನ್ನ ತಾಯಿ ರಕ್ಷಿಸುವಂತೆ ನಮ್ಮನ್ನು ಇಷ್ಟಾರ್ಥ ಕೊಟ್ಟು ರಕ್ಷಿಸಲಿ *
ಇಂತಹ ಅಮೂಲ್ಯವಾದ ಘಂಟಾನಾದ ಸೇವೆ ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು ಇಲ್ಲಿ ನಡೆಯುತ್ತಿದೆ. ಭಾರತದಲ್ಲೇ ದ್ವಿತೀಯ ಮತ್ತು ಕರ್ನಾಟಕ ರಾಜ್ಯದಲ್ಲೇ ಪ್ರಥಮ ಎಂದು ಪ್ರಸಿದ್ಧಿಯಾಗಿರುವ 1500 ಕೆ.ಜಿ. ತೂಕದ ಘಂಟೆ ಇಲ್ಲಿ ರಾರಾಜಿಸುತ್ತಿದೆ.
ಶ್ರೀ ದೇವರ ಸನ್ನಿಧಾನದಲ್ಲಿ ಈ ಘಂಟಾನಾದ ಸೇವೆ ಸಲ್ಲಿಸಲಾಯಿತು. ಈ ಸೇವೆಯು ಪ್ರತಿ ಮಂಗಳವಾರ ಬೆಳಗ್ಗೆ 9.00 ರಿಂದ ರಾತ್ರಿ 7.00ರ ವರೆಗೆ ನಡೆಯುತ್ತದೆ. ಭಕ್ತಾಧಿಗಳು ದೇವಳದಲ್ಲಿ ಘಂಟಾನಾದ ಸೇವೆ ನೀಡಬಹುದು.

