207
ಕಾರ್ಕಳ: ಇಂದು ಶುಕ್ರವಾರ ಬೆಳಿಗ್ಗೆ ಕಾರ್ಕಳ ಬಿಜೆಪಿ ಅಭ್ಯರ್ಥಿ ಶ್ರೀ ವಿ ಸುನಿಲ್ ಕುಮಾರ್ ರವರು ಜೋಡು ರಸ್ತೆ ,ಜಾರ್ಕಳ ಕುಕ್ಕುಂದೂರು ಭಾಗದ ಗೇರು ಬೀಜದ ಕಾರ್ಖಾನೆಗಳಿಗೆ ಭೇಟಿ ನೀಡಿ, ಕಾರ್ಮಿಕರನ್ನು ಮಾತನಾಡಿಸಿ ಮತಯಾಚನೆ ನಡೆಸಿದರು.
ಕಳೆದ ಐದು ವರ್ಷದ ಅವಧಿಯಲ್ಲಿ ಶಾಸಕರಾಗಿ ಹಾಗೂ ಎರಡು ವರ್ಷ ಸಚಿವರಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿರುವ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಶೇಷವಾಗಿ ಮಹಿಳಾ ಕಾರ್ಮಿಕರಲ್ಲಿ ವಿಚಾರ ವಿನಿಮಯ ನಡೆಸಿದರು.

ಕಾರ್ಕಳ ಕ್ಷೇತ್ರವು ರಾಜ್ಯಕ್ಕೆ ಮಾದರಿಯಾಗಿ, ಕಾರ್ಕಳ ಜನತೆ ಹೆಮ್ಮೆಪಡುವಂತಹ ಸಾಧನೆಯ ಬಗ್ಗೆ ಸಹಿಸಲಾಗದೆ ಪ್ರತಿಪಕ್ಷದವರು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿ ಕೊಡದೆ, ಅಭಿವೃದ್ಧಿಪರ ಮತ ಚಲಾಯಿಸುವಂತೆ ವಿನಂತಿಸಿದರು
ಈ ಸಂದರ್ಭದಲ್ಲಿ ಕಾರ್ಖಾನೆಯ ಮಾಲೀಕರು, ಆಡಳಿತ ವರ್ಗ ಮತ್ತು ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು

