ಕುಂದಾಪುರ : ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ನೂತನ ಪ್ರಧಾನ ಕಚೇರಿ ಕಟ್ಟಡ ಬಾಂಡ್ಯ ಶ್ರೀ ಕೆ.ಸುಧಾಕರ ಶೆಟ್ಟಿ ಸಹಕಾರಿ ಸದನವು ಇಂದು ಶನಿವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಬಾಂಡ್ಯ ಕೆ ಸುಧಾಕರ ಶೆಟ್ಟಿ ತಿಳಿಸಿದ್ದಾರೆ
ಅತ್ಯಾಧುನಿಕ ಕಟ್ಟಡ :
ಕರಾವಳಿ ಜಿಲ್ಲೆಯಲ್ಲಿ ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ನೂತನ ಕಟ್ಟಡದ ಉದ್ಘಾಟನ ಸಮಾರಂಭವು ಇಂದು ಶನಿವಾರ ನಡೆಯಲಿದೆ.
ಇಂದು ಬೆಳಗ್ಗೆ 9.45ಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರಕುಮಾರ್ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಹಾಗೂ ಬಸ್ರೂರು ಮಾಹಾಲಿಂಗೇಶ್ವರ ದೇವಳ ಆಡಳಿತ ಧರ್ಮದರ್ಶಿಗಳಾದ ಬಿ ಅಪ್ಪಣ್ಣ ಹೆಗ್ಡೆಯವರು ಡಾ. ಎಂ ಎನ್ ರಾಜೇಂದ್ರ ಕುಮಾರ್ ಸಭಾಭವನ, ಸಂಸದ ಬಿ.ವೈ. ರಾಘವೇಂದ್ರ ಬ್ಯಾಂಕಿಂಗ್ ವಿಭಾಗ, ಬೈಂದೂರು ಶಾಸಕ ಗುರುರಾಜ ಗಂಟೆಹೊಳೆ ಭದ್ರತಾ ಕೊಠಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಗೋದಾಮು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ದುರ್ಗಾ ಪರಮೇಶ್ವರಿ ಭೋಜನ ಶಾಲೆ, ಕುಂದಾಪುರ ಶಾಸಕ ಕಿರಣ್ ಕುಮಾರ ಕೊಡ್ಲಿ ಸಭಾಭವನ ಉದ್ಘಾಟಿಸುವರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಬಿ. ಎಂ.ಸುಕುಮಾರ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಮಹೇಶ್ ಹೆಗ್ಡೆ ಎಸ್. ರಾಜು ಪೂಜಾರಿ ಯಡ್ತರೆ, ಟಿಎಪಿಸಿಎಂಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಸಹಕಾರ ಸಂಘಗಳ ಉಪನಿಬಂಧಕ ಲಾವಣ್ಯ ಕೆ. ಆರ್., ಸಹಾಯಕ ನಿಬಂಧಕಿ ಸುಕನ್ಯಾ, ಹಾಲು ಒಕ್ಕೂಟ ಮಾಜಿ ನಿರ್ದೇಶಕ ಬಾಂಡ್ಯ ಸುಬ್ಬಣ್ಣ ಶೆಟ್ಟಿ ಕರ್ಕುಂಜೆ ಗ್ರಾಪಂ ಅಧ್ಯಕ್ಷ ಬಿಜ್ರಿ ರಾಜೀವ ಶೆಟ್ಟಿ ಆಜ್ರಿ-ಕೊಡ್ಲಾಡಿ ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಗುಲ್ವಾಡಿ ಗ್ರಾಪಂ ಅಧ್ಯಕ್ಷೆ ಶೋಭಾ ಭಾಗವಹಿಸಲಿದ್ದು ಮಧ್ಯಾಹ್ನ 2 ಗಂಟೆಗೆ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ನಾಗಶ್ರೀ ಯಕ್ಷಗಾನ ಪ್ರದರ್ಶನ ಜರುಗಲಿದೆ ಎಂದು ಬಾಂಡ್ಯ ಸುಧಾಕರ ಶೆಟ್ಟಿ ತಿಳಿಸಿದ್ದಾರೆ