ಜನಮನ್ನಣೆ ಗಳಿಸಿದ ಬ್ಯಾಂಕ್ – ಶ್ರೀರಮಣ ಉಪಾಧ್ಯಾಯ
ಕೋಟ : ಕರ್ಣಾಟಕ ಬ್ಯಾಂಕ್ ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ರೂಪುಗೊಂಡು ರಾಷ್ಟಿçÃಯ ಮಟ್ಟದಲ್ಲೂ ಶಾಖೆಹೊಂದಿ ಜನಮನ್ನಣೆ ಗಳಿಸಿದ ಬ್ಯಾಂಕ್ ಆಗಿದೆ ಎಂದು ಆನೆಗುಡ್ಡೆ ಶ್ರೀವಿನಾಯಕ ದೇಗುಲದ ಅನುವಂಶಿಕ ಆಡಳಿತ ಮುಕ್ತೇಸರ ಶ್ರೀರಮಣ ಉಪಾಧ್ಯಾಯ ಹೇಳಿದರು.
ಕೋಟದ ಕರ್ಣಾಟಕ ಬ್ಯಾಂಕ್ 58ರ ವರ್ಷಾಚರಣೆ ಅಂಗವಾಗಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಬ್ಯಾಂಕ್ಗಳು ಜನರ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವುದಲ್ಲದೆ ಆರ್ಥಿಕ ಕ್ರೋಡೀಕರಣದ ಕೇಂದ್ರವಾಗಿದೆ,ಜನಸಾಮಾನ್ಯರ ಆರ್ಥಿಕ ಶಕ್ತಿಗೆ ಕರ್ಣಾಟಕ ಬ್ಯಾಂಕ್ ಕೊಡುಗೆ ಅನನ್ಯ ಎಂದರಲ್ಲದೆ ಹೊಸ ಹೊಸ ಆವಿಷ್ಕಾರಗಳನ್ನು ಉಪಯೋಗಿಸಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿಸಮನಾಗಿ ನಿಂತಿದೆ ಎಂದರು.
ಕರ್ಣಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಛೇರಿಯ ಸಹಾಯ ಮಹಾ ಪ್ರಭಂಧಕ ವಾದಿರಾಜ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಧಾರ್ಮಿಕ ವಿಧಿ ವಿಧಾನವನ್ನು ವೇ.ಮೂ ಶ್ರೀಧರ ಪುರಾಣಿಕ್ ನೆರವೆರಿಸಿದರು.
ಕೋಟ ಶಾಖೆಯ ಸಿಬ್ಬಂದಿ ಶ್ರೀಮತಿ ನಾಗೇಶ್ ಮಯ್ಯ ಧಾರ್ಮಿಕ ವಿಧಿವಿಧಾನದ ಗಣಹೋಮದಲ್ಲಿ ಭಾಗಿಯಾದರು.
ಕರ್ಣಾಟಕ ಬ್ಯಾಂಕ್ ನಿವೃತ್ತ ಡಿ.ಜಿ.ಎಂ ಆನಂದರಾಮ ಅಡಿಗ,ಸಾನ್ವಿ ಟೆಕ್ನಾಲಜಿ ಇದರ ಚೇರ್ಮೆನ್ ಚಿನ್ಮಯ್ ಬಾಯರಿ, ಕ್ಲಸ್ಟರ್ ಹೆಡ್ ವಿಷ್ಣುಮೂರ್ತಿ ಮಯ್ಯ ಉಪಸ್ಥಿತರಿದ್ದರು. ಕೋಟ ಶಾಖೆಯ ಸಹಾಯಕ ಪ್ರಭಂಧಕಿ ಜ್ಯೋತಿ ಕುಮಾರಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಿಬ್ಬಂದಿ ವಿನಯ್ ಕಾಂಚನ್ ನಿರೂಪಿಸಿದರು.,ಸಿಬ್ಬಂದಿ ಸಮಿತ್ ವಂದಿಸಿದರು.