ಕುಂದಾಪುರ : ಕುಂದಾಪುರ ಪುರಸಭೆಯ 2ನೇ ವಾರ್ಡ್ ವ್ಯಾಪ್ತಿಯ ಖಾರ್ವಿಕೇರಿಯ ಮೇಲ್ ಕೇರಿ ಸರಕಾರಿ ಬಾವಿಕಟ್ಟೆ ಬಳಿ ಚರಂಡಿ ಹಾಗೂ ರಸ್ತೆಯ ಭಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವ ಬಗ್ಗೆ ಸಾರ್ವಜನಿಕರ ಪರವಾಗಿ ಸತೀಶ್ ಖಾರ್ವಿ ಉಡುಪಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರ ಪುರಸಭೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಆಡಳಿತದ ಆದೇಶದಂತೆ ಕುಂದಾಪುರ ಭೂಮಾಪನ ಅಧಿಕಾರಿ ವಿಜಯ್ ಕುಮಾರ್ ಹಾಗೂ ಕುಂದಾಪುರ ಗ್ರಾಮ ಆಡಳಿತ ಅಧಿಕಾರಿ ಆನಂದ್ ಹಾಗೂ ಸಿಬ್ಬಂದಿ ರಾಘವೇಂದ್ರ ಘಟನಾ ಸ್ಥಳಕ್ಕೆ ಆಗಮಿಸಿ ಸರ್ವೆ ಮಾಡಿ ಸಾರ್ವಜನಿಕರ ಮನವಿಗೆ ಸ್ಪಂದಿಸಿದ್ದಾರೆ
ಗ್ರಾಮಸ್ಥರು ಹಾಗೂ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಜಿಲ್ಲಾ ಆಡಳಿತ ಹಾಗೂ ಕುಂದಾಪುರ ಪುರಸಭೆ ಅಧಿಕಾರಿಗಳಿಗೆ ಸತೀಶ್ ಖಾರ್ವಿ ಅಭಿನಂದನೆ ಸಲ್ಲಿಸಿದ್ದಾರೆ