Home » ಕೋಡಿಕನ್ಯಾನ ಶಾಲೆಯಲ್ಲಿ ಸಾಹಿತ್ಯ ಪ್ರೇರಣ ಕಾರ್ಯಕ್ರಮ
 

ಕೋಡಿಕನ್ಯಾನ ಶಾಲೆಯಲ್ಲಿ ಸಾಹಿತ್ಯ ಪ್ರೇರಣ ಕಾರ್ಯಕ್ರಮ

by Kundapur Xpress
Spread the love

ಕೋಟ : ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಾಹಿತ್ಯ ಪ್ರೇರಣ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಡಿಕನ್ಯಾನ ಇಲ್ಲಿ ಇತ್ತೀಚಿಗೆ ಜರಗಿತು.
ಕಾರ್ಯಕ್ರಮವನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಕೆ.ಚಂದ್ರಶೇಖರ ನಾವಡ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಮೌಲ್ಯವರ್ಧನೀಯ ಭಾಗವಾಗಿ ಉತ್ತಮ ವ್ಯಕ್ತಿತ್ವ ಗುಣಗಳು, ಕೇವಲ ಶಿಕ್ಷಣದಿಂದಲ್ಲ ನೈತಿಕತೆಗಳನ್ನು ಕಥೆ ಕವನ ಅಭಿನಯದ ಮೂಲಕ ವಿದ್ಯಾರ್ಥಿಗಳ ಅರಿವಿಗೆ ತರಬೇಕು ಎಂದು ತಿಳಿಸಿದರು.
ಬ್ರಹ್ಮಾವರ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ರಾಮಚಂದ್ರ ಐತಾಳ್ ಕನ್ನಡ ಭಾಷೆ ಬಳಸಿದಷ್ಟು ಬೆಳೆಯುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಶಿಕ್ಷಕ ನಾಗೇಶ ಮಯ್ಯ, ನರಸಿಂಹ ತುಂಗ, ಸ್ನೇಹಕೂಟದ ಭಾರತಿ ಮಯ್ಯ, ಭಾಗ್ಯೇಶ್ವರಿ ಮಯ್ಯ ಕವನ ರಚನೆ, ಕಥೆ ರಚನೆ, ಪಠ್ಯದ ಪದ್ಯಗಳು, ನಾಟಕ ಅಭಿನಯ, ಯಕ್ಷಗಾನ ಪ್ರಾತ್ಯಕ್ಷಿಕೆ ಇವುಗಳನ್ನು ಮಾಡಿ ತೋರಿಸಿ ಭಾವನೆಗಳಿಗೆ ಭಾಷೆ ಕೊಟ್ಟು ಭಾಷೆಯನ್ನು ಬೆಳೆಸುವುದರಲ್ಲಿ ಸಹಕರಿಸಿದರು.
ಅತಿಥಿಗಳಾಗಿ ಪಂಚಾಯತ್ ಅಧಿಕಾರಿ ಪೂರ್ಣಿಮ ಅಧಿಕಾರಿ, ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿ ಸಂಪ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಜ್ಯೋತಿ ಅವರು ಧನ್ಯವಾದ ನೀಡಿದರು. ವಿಜಯ ನಾಯಿರಿ ಅವರು ಕಾರ್ಯಕ್ರಮ ನಿರೂಪಿಸಿದರು

 

Related Articles

error: Content is protected !!