298
ಕುರುಕ್ಷೇತ್ರದಲ್ಲಿ ಶ್ರೀಪಾದರು
ಉಡುಪಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯರಾದ ಸುಶೀಂದ್ರ ತೀರ್ಥ ಶ್ರೀಪಾದರೊಂದಿಗೆ ಹರ್ಯಾಣಾದ ಕುರುಕ್ಷೇತ್ರಕ್ಕೆ ತಮ್ಮ ಪರ್ಯಾಯ ಪೂರ್ವ ಸಂಚಾರದ ನಿಮಿತ್ತ ಭೇಟಿ ನೀಡಿದರು

ಭಗವದ್ಗೀತೆಯ ಉಗಮ ಸ್ಥಾನವಾದ ಪವಿತ್ರ ಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಭಾವಿ ಪರ್ಯಾಯ ಶ್ರೀಪಾದರಾದ ಪೂಜ್ಯ ಪುತ್ತಿಗೆ ಶ್ರೀಪಾದಂಗಳವರು ತಮ್ಮ್ ಪರ್ಯಾಯದ ಬೃಹದ್ ಯೋಜನೆಯಾದ ಕೋಟಿ ಗೀತಾಲೇಖನ ಯಜ್ಞ ದ ಬಗ್ಗೆ ಉಪನ್ಯಾಸ ಹಾಗೂ ಪತ್ರಿಕಾಗೋಷ್ಠಿ ನಡೆಸಿದರು

ತಮ್ಮ ಪರ್ಯಾಯದ ಬೃಹದ್ ಯೋಜನೆಯಾದ ಕೋಟಿ ಗೀತಾಲೇಖನ ಯಜ್ಞದ ಬಗ್ಗೆ ಹರ್ಯಾಣ ಸರಕಾರದ ವತಿಯಿಂದ ಪ್ರೋತ್ಸಾಹದ ರೂಪದಲ್ಲಿ ಅನೇಕ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಿತು

