Home » ಲಯನ್ಸ್‌ ಕ್ಲಬ್‌ : ಹಲಸು ಮಾವು ಮತ್ತು ಕೃಷಿಮೇಳ
 

ಲಯನ್ಸ್‌ ಕ್ಲಬ್‌ : ಹಲಸು ಮಾವು ಮತ್ತು ಕೃಷಿಮೇಳ

by Kundapur Xpress
Spread the love

ಕುಂದಾಪುರ : ಕೃಷಿಕರನ್ನು ಉತ್ತೇಜಿಸಲು, ಪ್ರೋತ್ಸಾಹಿಸಲು ಕುಂದಾಪುರದಲ್ಲಿ ನಡೆಸಿಕೊಂಡು ಬರುತ್ತಿರುವ ಹಲಸು ಮತ್ತು ಮಾವು ಮೇಳ ಲಯನ್ಸ್ ಇತಿಹಾಸದಲ್ಲೇ ವಿಶಿಷ್ಟ ಕಾರ್ಯಕ್ರಮ ಎಂದು ಲಯನ್ಸ್ ಜಿಲ್ಲಾ ನಿಯೋಜಿತ ಉಪ ಗವರ್ನರ್ ಹರಿಪ್ರಸಾದ್ ರೈ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ನೇತೃತ್ವದಲ್ಲಿ ಸಂಸ್ಕೃತಿ- ಸಂಭ್ರಮ ಟ್ರಸ್ಟ್ ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿರುವ 3 ದಿನಗಳ ಹಲಸು ಮತ್ತು ಮಾವು ಮೇಳ ಉದ್ಘಾಟಿಸಿ ಅವರು ಮಾತನಾಡಿದರು

ಶ್ರೀ ಸನ್ನಿಧಿ ಟ್ರಾವೆಲ್ಸ್. ಮಾಲೀಕ ಎಂ.ಸತೀಶ್ ಶೆಟ್ಟಿ ಮಾತನಾಡಿ, ಹಲಸು ಆರೋಗ್ಯಯುತ ಹಲವು ರೀತಿಯ ಉತ್ಪನ್ನಗಳಿಗೆ ಸಾಕ್ಷಿಯಾಗಿದೆ ಎನ್ನುವುದು ಮೇಳ ನೋಡಿ ಅರಿವಾಯಿತು ಎಂದರು.

ಶ್ರೀ ಸನ್ನಿಧಿ ಟ್ರಾವೆಲ್ಸ್‌ನ ಆಡಳಿತ ನಿರ್ದೇಶಕ ಸನ್ನಿಧಿ ಎಸ್.ಶೆಟ್ಟಿ, ಎಸ್‌ಪಿಜಿ ಜುವೆಲ್ಲರ್‌ನ ಎಸ್.ಎಂ.ಇರ್ಶಾದ್ ಅರುಣ್‌ ಕುಮಾರ್‌ ಹೆಗ್ಡೆ ಶುಭ ಹಾರೈಸಿದರು. ಲಯನ್ಸ್ ಕ್ಲಬ್ ಕುಂದಾಪುರ ಕೌನ್‌ನ ಸ್ಥಾಪಕಾಧ್ಯಕ್ಷ ಕಿರಣ್ ಕುಂದಾಪುರ, ಕ್ಲಬ್‌ನ ಕಾರ್ಯದರ್ಶಿ ಜಗದೀಶ್, ಕ್ಲಬ್‌ನ ಪ್ರಮುಖರಾದ ಪ್ರಭಾಕರ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಮಹಮ್ಮದ್ ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು. ಸುನಿಲ್ ಕುಮಾರ ಶೆಟ್ಟಿ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ ಅಧ್ಯಕ್ಷ ಜನನಿ ದಿನಕರ ಶೆಟ್ಟಿ ಸ್ವಾಗತಿಸಿದರು. ಐಶ್ವರ್ಯ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು.

 

Related Articles

error: Content is protected !!