ಉಡುಪಿಯ ಕಾರ್ಮಿಕ ಅಧಿಕಾರಿಯಾಗಿರುವ ಬಿ ಆರ್ ಕುಮಾರ್ ರವರ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ ದಾಳಿ ವೇಳೆ ಚರಾಸ್ತಿಗಳಾದ 275 ಗ್ರಾಂ ಚಿನ್ನ 2.5ಕೆಜಿ ಬೆಳ್ಳಿ 2 ಕಾರು 3 ಲಕ್ಷ ರೂ.ನಗದು ಹಾಗೂ 4 ಲಕ್ಷ ರೂ. ಬ್ಯಾಂಕ್ ಎಫ್ ಡಿ ಹೊಂದಿದ್ದಾರೆ
ಸ್ಥಿರಾಸ್ತಿ ಗಳಾದ ಉಡುಪಿಯಲ್ಲಿ 1 ಮನೆ 1 ಸೈಟ್ ಮೈಸೂರಿನಲ್ಲಿ 1 ಸೈಟ್ ಹಾಸನದಲ್ಲಿ 1 ಸೈಟ್ ಅರಕಲಗೋಡಿನಲ್ಲಿ 2 ಎಕರೆ ಜಮೀನು ಒಟ್ಟು 1.40 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ
ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸಿ.ಎ ಸೈಮನ್ ಇವರ ನಿರ್ಧೇಶನದಂತೆ ಉಡುಪಿ ಲೋಕಾಯುಕ್ತ ಪೊಲೀಸ್ ಉಪಾದೀಕ್ಷಕರು, ಕೆ.ಸಿ ಪ್ರಕಾಶ್ ಪೊಲೀಸ್ ನಿರೀಕ್ಷಕರಾದ ಜಯರಾಮ ಗೌಡ ಹಾಗೂ ರಫೀಕ್ ಎಂ ಇವರ ತಂಡ ಉಡುಪಿ ಕಾರ್ಮಿಕ ಅಧಿಕಾರಿ ಕುಮಾರ್ ಬಿ ಅರ್ ಇವರ ಮನೆ ಹಾಗೂ ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ದಾಳಿ ನಡೆಸಿದ್ದು ವಿವಿಧ ದಾಖಲಾತಿ ವಶಪಡಿಸಿ ಕೊಂಡಿದ್ದು ತನಿಖೆ ಮುಂದುವರಿದಿದೆ