Home » ಅಂತೂ ಅಶ್ಫಕ್‌ ನನ್ನೆ ವರಿಸಿದ ಹಿಂದು ಯುವತಿ
 

ಅಂತೂ ಅಶ್ಫಕ್‌ ನನ್ನೆ ವರಿಸಿದ ಹಿಂದು ಯುವತಿ

by Kundapur Xpress
Spread the love

ಮಂಗಳೂರು : ಹಿಂದು ಸಂಘಟನೆ ಹಾಗೂ ತಂದೆ-ತಾಯಿಯ ಹೋರಾಟದ ಹೊರತೂ ಕಾಸರಗೋಡಿನ ನಟೋರಿಯಸ್ ಗಡಿನಾಡು ಕಾಸರಗೋಡಿನ ಹಿಂದು ಯುವತಿಯು ನಟೋರಿಯಸ್‌  ಕ್ರಿಮಿನಲ್ ಮುಸ್ಲಿಂ ಯುವಕನೊಂದಿಗೆ ಮದುವೆಯಾಗಿದ್ದಾಳೆ. ಆಕೆಯನ್ನು ಯುವಕ ಇಸ್ಲಾಂಗೆ ಮತಾಂತರಿಸಿ ವಿವಾಹವಾದ ಬಗ್ಗೆ ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, ಆಕೆಯ ತಂದೆಯನ್ನುದ್ದೇಶಿಸಿ, ‘ಕ್ಷಮಿಸಿ, ಆಗಲಿಲ್ಲ. ನಿಮ್ಮ ಮಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ’ ಎಂದು ಖೇದ ವ್ಯಕ್ತಪಡಿಸಿ ಬರೆಯಲಾಗಿದೆ.

ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ ಎಂಬಾಕೆಯನ್ನು ಅಲ್ಲಿನ ಹೈಕೋರ್ಟ್ ಆದೇಶದಂತೆ  ಕೇರಳದ  ಮೊಹಮ್ಮದ್ ಅಶ್ಫಾಕ್ ಮದುವೆಯಾಗಿದ್ದಾನೆ.

ಇದು 2ನೇಮದುವೆ : ‌ಮೊಹಮ್ಮದ್ ಅಶ್ವಾಕಿಗೆಗೆ ಈಗಾಗಲೇ ಒಂದು ಮದುವೆಯಾಗಿದ್ದು, ಆತನಿಗೆ ಇದು ಎರಡನೇ ಮದುವೆ. ಈತನ ವಿರುದ್ಧ ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಮೊಹಮ್ಮದ್ ಅಶ್ವಾಕ್ ವಿದ್ಯಾನಗರ ನಿವಾಸಿ ವಿಸ್ಮಯಳನ್ನು ಪ್ರೀತಿಯ ಬಲೆಗೆ ಬೀಳಿಸಿದ್ದನು

ಈ ಬಗ್ಗೆ ವಿಚಾರ ತಿಳಿದ ವಿಸ್ಮಯ ತಂದೆ ವಿನೋದ್ ಅವರು ವಿಸ್ಮಯಳನ್ನು ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇರಿಸಿ ಬಿಸಿಎ ಶಿಕ್ಷಣ ಕೊಡಿಸುತ್ತಿದ್ದರು. ಆದರೆ ಇಲ್ಲಿಯೂ ಆಕೆಯನ್ನು ಬಿಡದ ಆಶ್ಚಕ್, “ಯುವತಿಯನ್ನು ಪ್ರೀತಿಯ ಮೋಹಕ್ಕೆ ಬೀಳಿಸಿ ಕಳೆದ ಜೂನ್ 6 ರಂದು ಉಳ್ಳಾಲದಿಂದ ಕರೆದುಕೊಂಡು ಹೋಗಿದ್ದನು. ಈ ಬಗ್ಗೆ ಪೋಷಕರ ದೂರಿನ ಮೇರೆಗೆ ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನು ಮನೆಯವರ ಜೊತೆ ಕಳುಹಿಸಿದ್ದರು.

ನಂತರ ಜೂನ್ 30ರಂದು ಆಶ್ಚಕ್ ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು. ಈ ವೇಳೆ ಆಕೆಯ ಪೋಷಕರು ಮಂಗಳೂರಿನಲ್ಲಿ ಹಿಂದು ಸಂಘಟನೆ ಮುಖಂಡರನ್ನು ಭೇಟಿಯಾಗಿ, ಕ್ರಿಮಿನಲ್ ಕೇಸ್‌ ಹೊಂದಿರುವ ಅಶ್ವಾಕ್ ಎರಡು ತಿಂಗಳ ಪರಿಚಯದಲ್ಲೇ ವಿಸ್ಮಯಳನ್ನು ಮೈಂಡ್ ವಾಶ್ ಮಾಡಿದ್ದಾನೆ. ಕೇರಳದಲ್ಲಿ ವಿಸ್ಮಯಳನ್ನು ಮತಾಂತರಿಸಲು ಯತ್ನಿಸಿದ್ದಾನೆ. ನನ್ನ ಮಗಳನ್ನ ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು.

ಈ ನಡುವೆ ಅಶ್ಚಾಕ್ ಕೇರಳ ಹೈಕೋರ್ಟ್ಗೆ  ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದಿದೆ. ಕೊನೆಗೆ ನ್ಯಾಯಾಲಯದ ಆದೇಶ ಆಶ್ಚಕ್‌ ಪರವಾಗಿ ಬಂದಿದೆ. ಕಾನೂನು ಹೋರಾಟದಲ್ಲೂ ಎರಡನೇ ಮದುವೆಗೆ ಕೇರಳ ಹೈಕೋರ್ಟ್ ಅವಕಾಶ ನೀಡಿದೆ. ಇದೀಗ ಆ ವಿಸ್ಮಯಳನ್ನು ಇಸ್ಲಾಂಗೆ ಮತಾಂತರಿಸಿ ವಿವಾಹವಾಗಿದ್ದಾನೆ. 

   

Related Articles

error: Content is protected !!