ಕುಂದಾಪುರ : ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಮರವಂತೆ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿದ್ದ ಬೆಳ್ಳಿ ರಥ ಅನಾದಿ ಕಾಲದಲ್ಲಿ ಸಮುದ್ರದಲ್ಲಿ ಹುದುಗಿದೆ ಎನ್ನುವ ವಿಷಯ ಪ್ರಶ್ನಾ ಚಿಂತನೆಯಲ್ಲಿ ಮೂಡಿಬಂದಿದೆ. ಈ ನಿಟ್ಟಿನಲ್ಲಿ ದೇವರಿಗೆ ಬೆಳ್ಳಿ ರಥವನ್ನು ಸಮರ್ಪಣೆ ಮಾಡಲು ನಿರ್ಧರಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಎಂ.ನಾಯಕ್ ಹೇಳಿದರು.
ಬೈಂದೂರು ತಾಲೂಕಿನ ಮರವಂತೆ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದಲ್ಲಿ ಸೋಮವಾರ ಬೆಳ್ಳಿರಥ ಲೋಕಾರ್ಪಣೆ ಮನವಿ ಪತ್ರ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.ಶ್ರೀದೇವರಿಗೆ ಸಮರ್ಪಣೆ ಮಾಡಲಿರುವ ಬೆಳ್ಳಿ ರಥ ನಿರ್ಮಾಣಕ್ಕೆ ಅಂದಾಜು ಒಂದು ಕೋಟಿ ರೂ.ಗೂ ಅಧಿಕ ವೆಚ್ಚವಾಲಿದ್ದು, ದಾನಿಗಳು, ಭಕ್ತಾದಿಗಳು, ಗ್ರಾಮಸ್ಥರು ಸಹಕರಿಸಬೇಕು ಎಂದು ವಿನಂತಿಸಿದರು. ಕರಾವಳಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಯಶವಂತ ಗಂಗೊಳ್ಳಿ, ಮೀನುಗಾರ ಮುಖಂಡರಾದ ಚಂದ್ರ ಖಾರ್ವಿ ಮರವಂತೆ, ವೆಂಕಟರಮಣ ಖಾರ್ವಿ, ಗಣೇಶ ಖಾರ್ವಿ, ಪ್ರಕಾಶ, ಶೋಭಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು