Home » ಶಾಸಕರಿಂದ ವಸತಿ ಸಚಿವರ ಭೇಟಿ
 

ಶಾಸಕರಿಂದ ವಸತಿ ಸಚಿವರ ಭೇಟಿ

by Kundapur Xpress
Spread the love

ಕುಂದಾಪುರ : ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ ಕಿರಣ್ ಕುಮಾರ್ ಕೊಡ್ಗಿ ಯವರು ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಅಂಬೇಡ್ಕರ್ ವಸತಿ ಯೋಜನೆ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರಾಗಿರುವ ಹೆಚ್ಚುವರಿ 2000 ಮನೆಯ ಅನುಮೋದನೆ ನೀಡಲು ಕಾಲಾವಕಾಶ ಒದಗಿಸುವಂತೆ ಮನವಿ ಸಲ್ಲಿಸಿದರು.

ಪ್ರಸ್ತುತ ಮನೆ ನಿರ್ಮಾಣ ಮಾಡಲು ಸಿಮೆಂಟ್, ಕಲ್ಲು, ಕಬ್ಬಿಣ ಹಾಗೂ ಇತರೆ ಸಾಮಗ್ರಿಗಳ ಬೆಲೆ ದುಬಾರಿಯಾಗಿರುವುದರಿಂದ ಸರ್ಕಾರ ನೀಡುತ್ತಿರುವ ಸಹಾಯಧನ ತುಂಬಾ ಕಡಿಮೆಯಾಗಿರುತ್ತದೆ ಮನೆ ನಿರ್ಮಾಣಕ್ಕೆ ಸರಕಾರದ ಸಹಾಯಧನ ಹೆಚ್ಚಿಸುವಂತೆ ಅವರು ವಿನಂತಿಸಿದರು

   

Related Articles

error: Content is protected !!