ಜೈಪುರ: ಸ್ವಜನಪಕ್ಷಪಾತ ಮತ್ತು ವಂಶಾಡಳಿತ ರಾಜಕಾರಣದ ವಿಷವರ್ತುಲದಲ್ಲಿ ಸಿಲುಕಿರುವ ಕಾಂಗ್ರೆಸ್ ಏಕಾಂಗಿಯಾಗುತ್ತಿದ್ದು, ಎಲ್ಲರೂ ಪಕ್ಷ ತೊರೆಯುತ್ತಿದ್ದಾರೆ. ದೇಶಕ್ಕೆ ನಷ್ಟವಾದರೂ, ಮೋದಿ ಮಾಡುವ ಕೆಲಸವನ್ನು ವಿರೋಧಿಸುವುದೊಂದೇ ಕಾಂಗ್ರೆಸ್ನ ಏಕೈಕ ಕಾರ್ಯ ಸೂಚಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜೈಪುರದಲ್ಲಿ ‘ವಿಕಸಿತ್ ಭಾರತ್, ವಿಕಸಿತ್ ರಾಜಸ್ಥಾನ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಯಾರಾದರೂ ತನಗೆ ಬೈದರೆ ಕಾಂಗ್ರೆಸ್ ಅವರನ್ನು ಅಪ್ಪಿಕೊಳ್ಳುತ್ತದೆ ಎಂದು ಮೋದಿ ನುಡಿದರು