277
ಕುಂದಾಪುರ : ನಗರದ ಸರಕಾರಿ ಆಸ್ಪತ್ರೆ ವಠಾರದಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ನಿನ್ನೆ ಬೆಳಿಗ್ಗೆ ಶ್ರೀ ಮೈಲಾರೇಶ್ವರ ದೇವರಿಗೆ ಶತರುದ್ರಾಭಿಷೇಕ ನಡೆಯಿತು ಹಾಗೂ ಶ್ರೀ ನಂದಿಕೇಶ್ವರ ದೇವಾಲಯದ ವತಿಯಿಂದ ಬೆಳ್ಳಿಯ ರುದ್ರಾಕ್ಷಿ ಮಾಲೆಯನ್ನು ಶ್ರೀ ಮೈಲಾರೇಶ್ವರ ದೇವರಿಗೆ ಸಮರ್ಪಿಸಲಾಯಿತು
ಈ ಸಂದರ್ಭದಲ್ಲಿ ಮೈಲಾರೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಬಿಲ್ಲವ ಕಾರ್ಯದರ್ಶಿ ಕೆ ಸೂರ್ಯಕಾಂತ್ ಸಮಿತಿಯ ಸದಸ್ಯರಾದ ಕೆ ಭಾಸ್ಕರ್ ಗಾಣಿಗ ಶ್ರೀ ನಂದಿಕೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ನಾಗೇಶ್ ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಚರಾದ ರಾಧಾಕೃಷ್ಣ.ಯು ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಶ್ರೀ ನಂದಿಕೇಶ್ವರ ದೇವಸ್ಥಾನ ಜೀರ್ಣೋದ್ಧಾರದ ಆಮಂತ್ರಣ ಪತ್ರಿಕೆಯನ್ನುನೀಡಲಾಯಿತು

