ಕುಂದಾಪುರ :ಉಡುಪಿ ಜಿಲ್ಲೆಯಾದ್ಯಂದ ಶುಕ್ರವಾರ ನಾಗರ ಪಂಚಮಿಯನ್ನು ವಿವಿಧ ದೇವಸ್ಥಾನಗಳಲ್ಲಿ ಹಾಗೂ ವಿವಿಧ ನಾಗ ಬನಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು
ಊರ – ಪರಊರ ಭಕ್ತರು ತಮ್ಮ ತಮ್ಮ ಮೂಲ ನಾಗಬನಕ್ಕೆ ಆಗಮಿಸಿ ನಾಗದೇವರಿಗೆ ಸೀಯಾಳ ಹಾಲಿನ ಅಭಿಷೇಕದೊಂದಿಗೆ ಕೇದಿಗೆ ಸಿಂಗಾರ ಇನ್ನಿತರ ಹೂವುಗಳನ್ನು ಅರ್ಪಿಸಿ ನಾಗನಿಗೆ ಭಕ್ತಿ ಶ್ರಧ್ದೆಯ ಪೂಜೆಯನ್ನು ಸಲ್ಲಿಸಿದರು
ಕುಂದಾಪುರದ ಊರಗ ತಜ್ಞರಾದ ಸುಧೀಂದ್ರ ಐತಾಳ್ ಎಂಬವರು ಜೀವಂತ ನಾಗನಿಗೆ ಪೂಜೆ ಸಲ್ಲಿಸುವ ಮೂಲಕ ನಾಗರ ಪಂಚಮಿ ಆಚರಿಸಿದರು