Home » ಊರ ಪ್ರಗತಿಗೆ ದೇವಸ್ಥಾನ ಅತೀ ಮುಖ್ಯ
 

ಊರ ಪ್ರಗತಿಗೆ ದೇವಸ್ಥಾನ ಅತೀ ಮುಖ್ಯ

ಕೆ ಆರ್‌ ನಾಯ್ಕ್

by Kundapur Xpress
Spread the love

ಕುಂದಾಪುರ : ‌ಊರಿನ ಅಭಿವೃಧ್ಧಿಗೆ ಕೇವಲ ಶಾಲಾ ಕಾಲೇಜು ಸಂಘ ಸಂಸ್ಥೆಗಳು ಹಾಗೂ ಆಸ್ಪತ್ರೆ ಮಾತ್ರ ಕಾರಣವಲ್ಲ ಊರ ಪ್ರಗತಿಗೆ ದೇವಸ್ಥಾನಗಳು ಅತೀ ಮುಖ್ಯ ಎಂದು  ವಿದ್ಯುತ್‌ ಗುತ್ತಿಗೆದಾರರಾದ ಕೆ ಆರ್‌ ನಾಯ್ಕ್‌ ನುಡಿದರು

ಅವರು ನಗರದ ಮುಖ್ಯ ರಸ್ತೆಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು

ದೇವಸ್ಥಾನಗಳು ಜೀರ್ಣೋಧ್ಧಾರಗೊಂಡ ಪರಿಸರದಲ್ಲಿ ಶಾಂತಿ ಸುಭಿಕ್ಷೆ ನೆಲೆಸಲಿದ್ದು ನಂದಿಕೇಶ್ವರನ ಸನ್ನಿಧಾನವನ್ನು ಪುನರ್‌ ಪ್ರತಿಷ್ಠೆಗೊಳಿಸಿದಾಗ ಪರಿಸರದ ಭಕ್ತರಿಗೆ ಯಾವ ಕಷ್ಟ ಕಾರ್ಪಣ್ಯಗಳು ಎಂದಿಗೂ ಬರುವುದಿಲ್ಲ ಎಂದರು

ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ.ನಾಗೇಶ್‌ ರವರು ವಹಿಸಿದ್ದರು ಆಮಂತ್ರಣ ಪತ್ರಿಕೆಯನ್ನು ಕುಂದಾಪುರ ರೆಡ್‌ ಕ್ರಾಸ್‌ ಸೊಸೈಟಿಯ ಸಭಾಪತಿಗಳಾದ ಎಸ್‌ ಜಯಕರ ಶೆಟ್ಟಿ ಅವರು ಬಿಡುಗಡೆ ಮಾಡಿದರು ಮುಖ್ಯ ಅತಿಥಿಗಳಾಗಿ ಫ್ರೆಂಡ್ಸ್ ಕ್ಲಬ್‌ ಅಧ್ಯಕ್ಷರಾದ ನಾಗರಾಜ್ ಖಾರ್ವಿ ಮೈಲಾರೇಶ್ವರ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಅಣ್ಣಪ್ಪಯ್ಯ ಮಾಸ್ಟರ್ ಹೂವಿನ ವ್ಯಾಪಾರಿ ಸಂಘಗಳ ಅಧ್ಯಕ್ಷರಾದ ಸತೀಶ್ ಕುಮಾರ್ ಕುಂದಾಪುರ ನಂದಿ ಫ್ರೆಂಡ್ಸ್ ಅಧ್ಯಕ್ಷರಾದ ಶಿವಪ್ರಸಾದ್ ಅವರು ಆಗಮಿಸಿದ್ದರು

ಗೋಪಾಲ ಪೂಜಾರಿ ನಿರೂಪಿಸಿದ ಕಾರ್ಯಕ್ರಮದಲ್ಲಿ  ಜೀರ್ಣೋಧ್ಧಾರ ಸಮಿತಿಯ ಅಧ್ಯಕ್ಷರಾದ ಯು ರಾಧಾಕೃಷ್ಣ ಸ್ವಾಗತಿಸಿ ಧನ್ಯವಾದವಿತ್ತರು

   

Related Articles

error: Content is protected !!