86
ಬೈಂದೂರು : 2024-25 ನೇ ಸಾಲಿನ ಕೇಂದ್ರ ಪುರಸ್ಕೃತ ಆಸ್ಕಾಡ್ ಯೋಜನೆಯಡಿಯಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರದ ಬೈಂದೂರು ತಾಲೂಕಿಗೆ ಜಾನುವಾರು ರೋಗ ನಿರ್ಣಯ ಪ್ರಯೋಗಾಲಯಕ್ಕೆ ಹೊಸ ಕಟ್ಟಡ ಮಂಜೂರಾಗಿದ್ದು ಇದರಿಂದ ವಿವಿಧ ರೋಗಗಳಿಂದ ಬಳಲುತ್ತಿರುವ ಜಾನುವಾರು ಗಳಿಗೆ ಸ್ಥಳೀಯವಾಗಿಯೇ ರೋಗ ನಿರ್ಣಯಿಸಲು ಸಾಧ್ಯವಾಗಲಿದೆ. ಸದರಿ ಪ್ರಯೋಗಾಲಯ ಗಳಿಗೆ ಹೊಸ ಕಟ್ಟಡದ ಮೂಲಭೂತ ಸೌಕರ್ಯ ಗಳಾದ ನೀರು, ವಿದ್ಯುತ್ ಇತ್ಯಾದಿ ಒದಗಿಸುವ ಕ್ರಮ ವಹಿಸಲಾಗುವುದು. ಆ ಮೂಲಕ ತಾಲೂಕಿನ ಜಾನುವಾರುಗಳಿಗೆ ತಗಲಬಹುದಾದ ರೋಗಗಳನ್ನು ಮೂಲದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಔಷದೋಪಚಾರ ಮಾಡಲು ಸಾಧ್ಯವಾಗುತ್ತದೆ. ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿ ಹೊಳೆಯವರು ತಿಳಿಸಿದ್ದಾರೆ.ಈ ಒಂದು ಯೋಜನೆ ಕ್ಷೇತ್ರಕ್ಕೆ ತರಲು ಶ್ರಮಿಸಿದ ಸಂಸದರಾದ ಶ್ರೀ ಬಿ. ವೈ ರಾಘವೇಂದ್ರ ರವರಿಗೂ ಇದೇ ಸಂದರ್ಭದಲ್ಲಿ ಶಾಸಕರು ಕೃತಜ್ಞತೆ ಸಲ್ಲಿಸಿದ್ದಾರೆ.

