ಕೋಟ: ಆರೋಗ್ಯ ಕ್ಷೇತ್ರದಲ್ಲಿ ಆರೋಗ್ಯ ಕಚವ ವಾಹನಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಅದರ ನಿರ್ವಾಹಕರ ಪಾತ್ರ ಅಷ್ಟೆ ಗಣನೀಯವಾದದ್ದು ಎಂದು ಕೋಟದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ.ಮಾಧವ ಪೈ ನುಡಿದರು.
ಇತ್ತೀಚಿಗೆ ಬ್ರಹ್ಮಾವರ ತಾಲೂಕಿನ ಕೋಟದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಆರೋಗ್ಯ ಕವಚ 108 ಆಂಬ್ಯುಲೇನ್ಸ್ ಇದನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವ ಅದೇ ರೀತಿ ಆಂಬ್ಯುಲೇನ್ಸ್ ನಿರ್ವಾಹಕರು ಸಹ ಅಷ್ಟೆ ಪ್ರಮಾಣದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಾರೆ ಇದು ಎಷ್ಟುಪ್ರಮಾಣದಲ್ಲಿ ಪ್ರಶಂಸಿದರು ಸಾಲದು ಅಲ್ಲದೆ ಜನಸಾಮಾನ್ಯರು ಇದರ ಪ್ರಯೋಜನೆಗಳನ್ನು ಅಷ್ಟೆ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಕವಚ 108 ಆಂಬ್ಯುಲೇನ್ಸ್ ಇದರ ಜಿಲ್ಲಾ ಪ್ರಭಂಧಕ ಗುರುರಾಜ್ ನಾಯಕ್,ಜಿಲ್ಲಾ 108 ಆಂಬ್ಯುಲೇನ್ಸ್ ವಾಹನ ನಿರ್ವಾಹಕರಾದ ಮಹಾಬಲ,ವೆಂಕಟೇಶ ನಾಯಕ,ಆರೋಗ್ಯ ಸೇವೆಯಲ್ಲಿಯಲ್ಲಿರುವ ನೌಕರರ ಸಂಘದ ಅಧ್ಯಕ್ಷ ಸಂದೀಪ್,ಇ.ಎಂ.ಟಿ ಜಾನ್ ಲೂಹಿಸ್,ಚಾಲಕರಾದ ಬಸವರಾಜ್,ಗಿರೀಶ್,ಕೋಟ ಸಮುದಾಯ ಆರೋಗ್ಯ ಕೇಮದ್ರದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.