Home » ಕಟಪಾಡಿ ಪಶು ಚಿಕಿತ್ಸಾಲಯಕ್ಕೆ ಗುದ್ದಲಿ ಪೂಜೆ
 

ಕಟಪಾಡಿ ಪಶು ಚಿಕಿತ್ಸಾಲಯಕ್ಕೆ ಗುದ್ದಲಿ ಪೂಜೆ

by Kundapur Xpress
Spread the love

ಕಾಪು : ಕಟಪಾಡಿ ಪಶು ಚಿಕಿತ್ಸಾಲಯ ನಿರ್ಮಾಣಕ್ಕೆ RIDF – 30 ಯೋಜನೆಯಡಿ 50 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ದಿನಾಂಕ 24-02-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಮೀಳಾ ಜತ್ತನ್ನ, ಉಪಾಧ್ಯಕ್ಷರಾದ ಯೋಗೀಶ್, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾ ಬಿ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ರಾಜೇಶ್ ಅಂಬಾಡಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರು ಡಾ.ರೆಡಪ್ಪ, ಕಾಪು ಸಹಾಯಕ ನಿರ್ದೇಶಕರಾದ ಡಾ. ಅರುಣ್, ಉಡುಪಿ ತಾಂತ್ರಿಕ ಸಹಾಯಕ ನಿರ್ದೇಶಕರಾದ ಡಾ. ಸಂದೀಪ್, ಕಟಪಾಡಿ ಪಶು ವೈದ್ಯಾಧಿಕಾರಿಗಳಾದ ವಿಜಯ್ ಕುಮಾರ್ ಹಾಗೂ ಕೋಟೆ ಮತ್ತು ಕಟಪಾಡಿ ಗ್ರಾಮ ಪಂಚಾಯತ್ ಸದಸ್ಯರು ಸ್ಥಳೀಯರು ಉಪಸ್ಥಿತರಿದ್ದರು.

 

Related Articles

error: Content is protected !!