ಗುರುರಾಜ್ ಗಂಟಿ ಹೊಳೆ ನಾಮಪತ್ರ ಸಲ್ಲಿಕೆ
ಕುಂದಾಪುರ : ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಗುರುವಾರ ಬೈಂದೂರು ಚುನಾವಣಾ ಅಧಿಕಾರಿ ಜಗದೀಶ್ ಗಂಗಣ್ಣನವರ್ ಅವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಬೈಂದೂರು ಚುನಾವಣೆ ವೀಕ್ಷಕರಾದ ದಿನೇಶ್ ಕುಮಾರ್ ಬೈಂದೂರು ತಾಸಿಲ್ದಾರ್ ಹಾಗೂ ಉಪಚುನಾವಣೆ ಅಧಿಕಾರಿ ಪ್ರಭುಸ್ವಾಮಿ ವಿ ಎಂ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪ ಕುಮಾರ್ ಶೆಟ್ಟಿ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ತೇಜಸ್ಪಿ ಸೂರ್ಯ ಬಿಜೆಪಿ ಸ್ಟಾರ್ ಪ್ರಚಾರಕಿ ಹಾಗೂ ನಟಿ ಶೃತಿ ಬೈಂದೂರು ಮಂಡಲದ ಚುನಾವಣಾ ಪ್ರಭಾರಿ ಕ್ಯಾಪ್ಟನ್ಬೃಜೇಶ್ ಚೌಟ ಉಪಸ್ಥಿತರಿದ್ದರು

ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಬೃಹತ್ ಪಾದಯಾತ್ರೆ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಗುರುರಾಜ್ ಜಂಟಿ ಹೊಳೆ ಅವರಿಗೆ ಬೆಂಬಲ ಸಾರಿ ಇತಿಹಾಸ ನಿರ್ಮಿಸಿದರು ನಾಮಪತ್ರ ಸಲ್ಲಿಸಲು ಬೈಂದೂರು ಶೆನೇಶ್ವರ ದೇವಸ್ಥಾನದ ಎದುರುಗಡೆಯಿಂದ ಸಾಗಿದ ಮೆರವಣಿಗೆಯಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಜ್ಜೆ ಹಾಕಿದರು ಬೈಲೂರು ಅಂಡರ್ ಪಾಸ್ ನಿಂದ ಬೈಂದೂರು ತಾಲೂಕು ರಾಷ್ಟ್ರೀಯ ಹೆದ್ದಾರಿ ಹಾಗೂ ಒಳ ರಸ್ತೆಗಳು ಸಂಪೂರ್ಣ ಕೇಶರಿಮಯವಾಗಿತ್ತು ಬಳಿಕ ಬೈಂದೂರು ಬಸ್ ನಿಲ್ದಾಣ ಸಮೀಪ ಬಿಜೆಪಿ ಕಾರ್ಯಕರ್ತ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೋಟ ಶ್ರೀನಿವಾಸ್ ಪೂಜಾರಿ ವೈಯಕ್ತಿಕವಾಗಿ ಯಾರಿಗೂ ಭಯೋತ್ಪಾದಕರು ಎಂದು ಕರೆದಿಲ್ಲ ಬದಲಾಗಿ ಕಾಂಗ್ರೆಸ್ ಪಕ್ಷ ಭಯೋತ್ಪಾದಕರಿಗೆ ಬೆಂಬಲ ನೀಡುವ ಪಕ್ಷ ಎಂದಿದ್ದೇನೆ ಎಂದರು ಭಾರತೀಯ ಜನತಾ ಪಕ್ಷ ಸಾಮಾನ್ಯ ಕಾರ್ಯಕರ್ತರು ಕೂಡ ಶಾಸಕರನ್ನಾಗಿ ಮಾಡುತ್ತದೆ ಎನ್ನುವುದಕ್ಕೆ ಬೈಂದೂರು ಬಿಜೆಪಿ ಅಭ್ಯರ್ಥಿ ಸಾಕ್ಷಿ ಎಂದರು
ಶಿವಮೊಗ್ಗ ಲೋಕಸಭಾ ಸಂಸದ ಬಿ ವೈ ರಾಘವೇಂದ್ರ ಮಾತನಾಡಿ ಕಳೆದ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಕಾರ್ಯಕರ್ತರ ಉತ್ಸಾಹ ಬಿಜೆಪಿ ಶಕ್ತಿಯಾಗಿದೆ ಎಂದರು ಸಭೆಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಬೈಲೂರು ಮಂಡಲ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಬೃಜೇಶ್ ಚೌಟ ಕಾಪು ಬಿಜೆಪಿ ಅಭ್ಯರ್ಥಿಗುರ್ಮೇ ಸುರೇಶ್ ಶೆಟ್ಟಿ ಕುಂದಾಪುರದ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಕೂಯಿಲಾಡಿ ಸುರೇಶ್ ನಾಯಕ್ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸುರೇಶ್ ಬಟ್ವಾಡಿ ಮುಂತಾದವರು ಉಪಸ್ಥಿತರಿದ್ದರು

