Home » ಉಡುಪಿಯಲ್ಲಿ 1.38 ಕೋಟಿ ವಂಚನೆ
 

ಉಡುಪಿಯಲ್ಲಿ 1.38 ಕೋಟಿ ವಂಚನೆ

by Kundapur Xpress
Spread the love

ಕುಂದಾಪುರ : ಪ್ರತಿ ನಿತ್ಯವೆಂಬಂತೆ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗುತ್ತಿರುವ ಆನ್‌ಲೈನ್ ವಂಚನೆಯ ಸುದ್ದಿಯನ್ನು ನೋಡಿಯೂ ಓದಿಯೂ ಕೂಡ ಉಡುಪಿ ಜಿಲ್ಲೆಯ ಜನತೆ ರಾತ್ರಿ ಕಂಡ ಬಾವಿಗೆ ಹಗಲು ಬೀಳುತ್ತಿದ್ದಾರೆ ಆನ್‌ಲೈನ್ ವ್ಯವಹಾರದ ಮೂಲಕ ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಒಂದು ಕೋಟಿ ರೂಪಾಯಿಗೂ ಮಿಕ್ಕಿ ವಂಚಿಸಿದ ಬಗ್ಗೆ ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಉಡುಪಿಯ ಅಲೆವೂರಿನ ವೆಂಕಟರಮಣ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್‌ನಲ್ಲಿ ಸಂಪರ್ಕಿಸಿ ಟ್ರೇಡಿಂಗ್ ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ, ಟ್ರೆಡಿಂಗ್ ಆ್ಯಪ್ ಲಿಂಕ್ ಕಳುಹಿಸಿದ್ದನು. ಇದನ್ನು ನಂಬಿದ ಅವರು ಲಿಂಕ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಬಳಿಕ ಅದರಲ್ಲಿ ಮಾಹಿತಿ ನಮೂದಿಸಿ. ಅನಂತರದ ಹಣವನ್ನು ಹೂಡಿಕೆ ಮಾಡಲು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಡಿ.5 ರಿಂದ ಜ.9ರ ವರೆಗೆ ಹಂತ ಹಂತವಾಗಿ 1,38,99,000 ರೂ.ಗಳನ್ನು ಪಾವತಿಸಿದ್ದಾರೆ. ಆದರೆ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶವನ್ನು ನೀಡದೇ ಆರೋಪಿಗಳು ವೆಂಕಟರಮಣ ಅವರಿಗೆ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ

   

Related Articles

error: Content is protected !!