Home » ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದ ಇಲ್ಲಿಗೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ಆಫ್ ಗ್ರಿಡ್ ಪವರ್ ಬ್ಯಾಕಪ್ ಸಿಸ್ಟಮ್ ಇದರ ಉದ್ಘಾಟನಾ ಕಾರ್ಯಕ್ರಮ
 

ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದ ಇಲ್ಲಿಗೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ಆಫ್ ಗ್ರಿಡ್ ಪವರ್ ಬ್ಯಾಕಪ್ ಸಿಸ್ಟಮ್ ಇದರ ಉದ್ಘಾಟನಾ ಕಾರ್ಯಕ್ರಮ

by Kundapur Xpress
Spread the love

ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೀಸ್ ಯೋಜನೆಯಲ್ಲಿ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇವರ ಸಿಎಸ್ಆರ್ ನಿಧಿಯಿಂದ ಸರಕಾರಿ ಪದವಿ ಪೂರ್ವ ಕಾಲೇಜು ನಾವುಂದ ಇಲ್ಲಿಗೆ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ಆಫ್ ಗ್ರಿಡ್ ಪವರ್ ಬ್ಯಾಕಪ್ ಸಿಸ್ಟಮ್ ಇದರ ಉದ್ಘಾಟನಾ ಕಾರ್ಯಕ್ರಮವನ್ನು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆ ಹಾಗೂ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ಇದರ ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಜೋಯಿಶಿ ನೆರವೇರಿಸಿದರು. ಇದರ ಜೊತೆಗೆ ಕಾಲೇಜಿನ ನೂತನ ಕೊಠಡಿಗಳ ಲೋಕಾರ್ಪಣೆಯನ್ನು ಶಾಸಕರು ಗಣ್ಯರ ಜೊತೆಗೂಡಿ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಬೈಂದೂರು ಕ್ಷೇತ್ರದ ಸರಕಾರಿ ಶಾಲಾ,ಕಾಲೇಜುಗಳಿಗೆ ಕ್ಯಾನ್ ಫಿನ್ ಸಂಸ್ಥೆ ಇದುವರೆಗೆ 1 ಕೋಟಿಗೂ ಅಧಿಕ ಮೊತ್ತದ ವಿವಿಧ ರೀತಿಯ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ತನ್ನ ಸಿ. ಎಸ್.ಆರ್ ನಿಧಿಯಿಂದ ಒದಗಿಸಿದೆ.ಸಂಸ್ಥೆಯ ಈ ಕೊಡುಗೆ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಇದು ರಾಷ್ಟ್ರಸೇವೆಯ ಕೆಲಸವೆಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾನ್ ಫಿನ್ ಹೋಂಮ್ಸ್ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಜೋಯಿಶಿ ವಿದ್ಯಾರ್ಥಿಗಳು ಕಾಲೇಜಿಗೆ ನೀಡಿದ ಕೊಡುಗೆಯ ಸದುಪಯೋಗ ಪಡಿಸಿಕೊಂಡು ಭವಿಷ್ಯದಲ್ಲಿ ತಾವು ಕೂಡ ಉನ್ನತ ಮಟ್ಟಕ್ಕೆ ಏರಬೇಕು ಮತ್ತು ವಿದ್ಯಾರ್ಜನೆ ಪಡೆದ ಕಾಲೇಜಿಗೆ ಕೊಡುಗೆ ನೀಡುವಂತಾಗಬೇಕೆಂದು ಅಭಿಪ್ರಾಯಪಟ್ಟರು.ಕಟ್ಟಡ ಹಾಗೂ ಸೌರವಿದ್ಯುತ್ ಘಟಕದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಪೂಜಾರಿಯವರು ವಹಿಸಿದ್ದರು. ಅತಿಥಿಗಳಾಗಿ ಶ್ರೀಮತಿ ಅನಿತಾ ಆರ್.ಕೆ, ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಬೈಂದೂರು, ಶ್ರೀಮತಿ ಪ್ರತಿಮಾ ಜೋಯಿಶಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಎಂ ಪ್ರಸ್ತಾವಿಕ ಮಾತು ನುಡಿದರು, ಉಪ ಪ್ರಾಂಶುಪಾಲರಾದ ಶ್ರೀಮತಿ ಶಶಿಕಲಾ ನಾಯಕ್ ಹಾಜರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಉಪನ್ಯಾಸಕರಾದ ಶ್ರೀ ಗಣೇಶ್ ಎಂ, ಸ್ವಾಗತವನ್ನು ಉಪನ್ಯಾಸಕಿ ಶ್ರೀಮತಿ ಶ್ರೀ ಲಕ್ಷ್ಮಿ ಕೆಎಸ್ ರವರು ಹಾಗೂ ವಂದನಾರ್ಪಣೆಯನ್ನು ಉಪನ್ಯಾಸಕರಾದ ಶ್ರೀಯುತ ಜೀವನ್ ಕುಮಾರ್ ಶೆಟ್ಟಿ ಅವರು ನೆರವೇರಿಸಿದರು.

 

Related Articles

error: Content is protected !!