85
ಬಂಟ್ವಾಳ : ತನ್ನ ಪಿಸ್ತೂಲಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮವಾಗಿ ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಅನಂತಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಚಿತ್ತರಂಜನ್ ಅವರನ್ನು ಪಡೀಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಮುಂದುವರಿದಿದೆ.
ಪರವಾನಗಿ ಸಹಿತ ಪಿಸ್ತೂಲು ಹೊಂದಿದ್ದ ಚಿತ್ತರಂಜನ್ ಅವರು ಮದುವೆಯೊಂದರ ಆಮಂತ್ರಣ ನೀಡಲು ಮಂಗಳವಾರ ಮಧ್ಯಾಹ್ನ ಅನಂತಾಡಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಹತ್ತಿರದಲ್ಲೇ ಇದ್ದ ಜಲ್ಲಿ ಕ್ವಾರಿಗೆ ಹೋಗಿ ಅವರಿಗಾಗಿ ಕಚೇರಿಯಲ್ಲಿ ಕಾಯುತ್ತಿದ್ದರು. ಆಗ ಸೊಂಟದಲ್ಲಿದ್ದಪಿಸ್ತೂಲನ್ನು ಬಟ್ಟೆಯಿಂದ ಒರೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರಿಗರ್ ಅದುಮಿದ್ದು ಗುಂಡು ಸಿಡಿದು ಕಾಲಿಗೆ ಗಾಯವಾಗಿದೆ
![](https://kundapurxpress.com/wp-content/uploads/2025/02/WhatsApp-Image-2025-02-05-at-12.29.39-PM.jpeg)
![](https://kundapurxpress.com/wp-content/uploads/2024/11/IMG-20241128-WA0000.jpg)