ಕೋಟ: ಕೇಂದ್ರದ ನರೇಂದ್ರ ಮೋದಿ ಅಲೆಯನ್ನು ಯಾರಿಂದಲೂ ತಡೆಯಲು ಸಾದ್ಯವಿಲ್ಲ ಕರಾವಳಿ ಕರ್ನಾಟಕವು ಬಿಜೆಪಿಯ ಭದ್ರಕೋಟೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಮಂಗಳವಾರ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗಮನದ ಹಿನ್ನಲೆಯಲ್ಲಿ ಸಾಸ್ತಾನದ ಮಾಬುಕಳದಿಂದ ಕುಂದಾಪುರದವರೆಗೆ ಆಯೋಜಿಸಲಾದ ಬೃಹತ್ ವಾಹನ ಜಾಥಾಕ್ಕೆ ಚಾಲನೆ ನೀಡಿ ಇಲ್ಲಿನ ಈ ವಾಹನ ಜಾಥಾದ ಯಶಸ್ಸಿನ ಹಿಂದೆ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಿರಣ್ ಕುಮಾರ್ ಕೊಡ್ಡಿಯವರಿದ್ದಾರೆ, ಈ ದಿಸೆಯಲ್ಲಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಭಾರಿ ಅಂತರದಲ್ಲಿ ಜಯಶಾಲಿಯಾಗಲಿದ್ದಾರೆ ಭಾರತೀಯ ಜನತಾ ಪಕ್ಷ ಏರ್ಪಡಿಸಿದ ಈ ವಾಹನ ಜಾಥ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಅಂತರದಲ್ಲಿ ಯಶಸ್ಸು ದೊರಕಲಿದೆ ಎಂದು ಆಶಿಸಿದರು.
ವಾಹನ ಜಾಥ ಕಾರ್ಯಕ್ರಮಕ್ಕೂ ಮುಂಚೆಯೇ ಸೇರಿದ್ದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಘೋಷಣೆಯನ್ನು ಕೂಗಿದರಲ್ಲದೆ ಸಂಚರಿಸುತ್ತದ್ದ ವಾಹನ ಜಾಥಾದಲ್ಲೂ ಮೋದಿ ಘೋಷಣೆ ವಿಜೃಂಭಿಸಿತು. ಈ ಸಂದರ್ಭದಲ್ಲಿ ಶಾಸಕರಾದ ಕಿರಣ್ ಕುಮಾರ್ ಕೊಡ್ಡಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು