159
ಉಡುಪಿ : ಮಾ.18 ರಂದು ಮಲ್ಪೆಯ ಮೀನುಗಾರಿಕಾ ಬಂದರಿನಲ್ಲಿ ಮೀನು ಕಳವುಗೈದ ಮಹಿಳೆಯನ್ನು ಕಟ್ಟಿ ಹಾಕಿ ಥಳಿಸಿರುವುದು ಖಂಡನೀಯ. ಆದರೆ ಮಲ್ಪೆ ಠಾಣೆಯಲ್ಲಿ ರಾಜಿಯಾದ ಮರುದಿನ ತನಿಖೆಗೆಂದು ಕರೆದು ಕ್ವಾಲರು ಮೀನುಗಾರ ಮಹಿಳೆಯರು ಹಾಗೂ ಓರ್ವ ಪುರುಷ ಮೀನುಗಾರರನ್ನು ಬಂಧಿಸಿರುವುದನ್ನು ಸಾವಿರಾರು ಮೀನುಗಾರರು ಶನಿವಾರ ಪ್ರತಿಭಟಿಸುವ ಮೂಲಕ ಖಂಡಿಸಿದರು
ಮಲ್ಪೆ ಮೀನುಗಾರರ ಸಂಘ ಹಾಗೂ ಸಮಸ್ತ ಮೀನುಗಾರರ ವತಿಯಿಂದ ಮಲ್ಪೆ ಬಂದರಿನ ಮೀನುಗಾರರ ಬಗ್ಗೆ ಅಪಪ್ರಚಾರವಾಗಿದೆ ಎಂದು ಆರೋಪಿಸಿ ಮಲ್ಪೆಯ ಸಮಸ್ತ ಮೀನುಗಾರರು ಮಲ್ಪೆ ಬಂದರಿನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಿದರು. ಸಭೆಯುದ್ದಕ್ಕೂ ಶಾಸಕ, ಮಾಜಿ ಸಚಿವ, ಮಾಜಿ ಶಾಸಕರು ಸೇರಿದಂತೆ ಮೀನುಗಾರ ಮುಖಂಡರು ಜಿಲ್ಲಾ ಎಸ್ಪಿ ಡಾ.ಅರುಣ್ ಅವರ ವಿರುದ್ಧ ಹರಿಹಾಯ್ದರು.


