ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಿರೀಕ್ಷಿತ ಗೆಲುವು ಲಭಿಸದಿದ್ದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ರಾಜಕೀಯ ಕಣದಿಂದ ಹಿಂದೆ ಸರಿಯುವ ಬಗ್ಗೆ ಯೋಚಿಸಬೇಕು ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ತಾವು ಮಾಡುತ್ತಿರುವ ಕಾರ್ಯಗಳ್ಯಾವುದೂ ಫಲ ನೀಡಿಲ್ಲ. ಹಾಗಾಗಿ ತಾವು ವಿಶ್ರಾಂತಿ ಪಡೆದು ತಮ್ಮ ಜವಾಬ್ದಾರಿಯನ್ನು 5 ವರ್ಷಗಳ ಅವಧಿಗೆ ಬೇರೆಯವರಿಗೆ ವಹಿಸುವುದು ಒಳಿತು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದಾಗ ನಿಮ್ಮ ತಾಯಿ ಸೋನಿಯಾ ರಾಜಕೀಯ ರಂಗದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದರು. ಮತ್ತು1991ರಲ್ಲಿ ಪಿ.ವಿ.ನರಸಿಂಹರಾವ್ ಅವರಿಗೆ ಪ್ರಧಾನಿ ಸ್ಥಾನ ಬಿಟ್ಟುಕೊಟ್ಟಿದ್ದರು ನೀಡಿದ್ದಾರೆ ಎಂದು ರಾಹುಲ್ಗೆ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದಾರೆ