328
ಉಡುಪಿ: ಕಳೆದ 2-3 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವು ಮನೆಗಳು ಜಾಲಾವೃತ್ತವಾಗಿದ್ದು ಅನೇಕ ಕೆರೆಗಳು ತುಂಬಿ ತುಳುಕುತ್ತಿದೆ
ಉಡುಪಿ ನಗರದ ಕೃಷ್ಣಮಠದ ಪಾರ್ಕಿಂಗ್ ಜಾಗ ಮತ್ತು ಸುತ್ತುಮುತ್ತಲಿನ ತಗ್ಗು ಪ್ರದೇಶಗಳಲ್ಲಿ ವ್ಯಾಪಕ ಮಳೆಯಿಂದಾಗಿ ಹಲವು ಮನೆಗಳು ಜಲಾವೃತ್ತಗೊಂಡಿದ್ದು ಅಲ್ಲಿಂದ ಜನರನ್ನು ಸ್ಥಳಾಂತರಗೊಳಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದೆ
ಉಡುಪಿಯ ಕಲ್ಸಂಕ ಹಾಗೂ ಬೈಲಕೆರೆ ಅಸುಪಾಸಿನಲ್ಲಿ ಹಲವು ಮನೆಗಳು ಮುಳುಗುವ ಭೀತಿಯಲ್ಲಿದ್ದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ ಕುಮಾರ್ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯವರ ಸಹಾಯದಿಂದ ಅನೇಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು

