ಕೋಟ: ಕೋಟದ ಕಲ್ಮಾಡಿ ಅಂಗನವಾಡಿ ಕೇಂದ್ರದಲ್ಲಿ ರಕ್ಷ ಬಂಧನ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಕಲ್ಮಾಡಿ ಅಂಗನವಾಡಿ ಕೇಂದ್ರದ ಪುಟಾಣಿಗಳು ಪರಸ್ಪರ ರಕ್ಷೆಯನ್ನು ಕಟ್ಟಿ ಸಿಹಿ ತಿನ್ನಿಸಿ ಅಕ್ಷತೆ ಹಾಕಿ ಸಂಭ್ರಮಿಸಿದರು. ರಕ್ಷ ಬಂಧನದ ಮೂಲ ಉದ್ದೇಶ ಹಾಗೂ ಪ್ರಾಮುಖ್ಯತೆ ಯನ್ನು ಮಕ್ಕಳಿಗೆ ಕಥೆ ಹೇಳಿ ತಿಳಿಸಲಾಯಿತು. ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ, ಉಪಸ್ಥಿತರಿದ್ದರು.