Home » ರಾಮಕ್ಷತ್ರಿಯ ಯುವಕ ಮಂಡಳಿ : ಕ್ರೀಡಾಕೂಟ ಉದ್ಘಾಟನೆ
 

ರಾಮಕ್ಷತ್ರಿಯ ಯುವಕ ಮಂಡಳಿ : ಕ್ರೀಡಾಕೂಟ ಉದ್ಘಾಟನೆ

ಸೋಲು ಗೆಲುವಿನ ಆರಂಭವಾಗಬೇಕು : ರಾಘವೇಂದ್ರ ಎಚ್‌ ನಾಯ್ಕ್

by Kundapur Xpress
Spread the love

ಕುಂದಾಪುರ : ಜೀವನದಲ್ಲಿ ಸೋಲು ಗೆಲವು ಎರಡೂ ಇರುತ್ತದೆ, ಆದರೆ ಸೋಲನ್ನು ಅರಗಿಸಿಕೊಳ್ಳಲಿಕ್ಕೆ ಆಗದಿದ್ದರೇ ಗೆಲುವನ್ನು ಅನುಭವಿಸಲಿಕ್ಕೆ ಆಗುವುದಿಲ್ಲ ಸೋಲು ಗೆಲುವಿನ ಆರಂಭವಾಗಬೇಕು ಎಂದು ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಎಚ್‌ ನಾಯ್ಕ್ ನುಡಿದರು

ರಾಮಕ್ಷತ್ರಿಯ ಯುವಕ ಮಂಡಲದ 60ನೇ ವರ್ಷದ ಗಣೇಶೋತ್ಸವ ಸಮಾರಂಭದ ಪ್ರಯುಕ್ತ ಜರುಗಿದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ಕ್ರೀಡೆಯಿಂದ ಮನೋರಂಜನೆ, ಆರೋಗ್ಯವರ್ಧನೆ ಸಾಧ್ಯವಾಗುತ್ತದೆ, ಜೊತೆಗೆ ನಾಯಕತ್ವದ ಗುಣ, ಕ್ರೀಡಾಸ್ಪೂರ್ತಿ, ತಂಡ ಸ್ಪೂರ್ತಿ ಕೂಡ ವೃದ್ದಿಯಾಗುತ್ತದೆ. ಸೋಲನ್ನು ತಡೆದುಕೊಳ್ಳುವ ಶಕ್ತಿ ಲಭಿಸುತ್ತದೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಕೇವಲ ಗೆಲುವಿಗಾಗಿ ಅಲ್ಲ, ಪಾಲ್ಗೊಳ್ಳುವುದು ಮುಖ್ಯ

ಗೆದ್ದವ ಲೀಡರ್ ಆಗುತ್ತಾನೆ, ಸೋತವ ಅಡ್ವೈಸರ್ ಆಗುತ್ತಾನೆ ಎರಡೂ ಕೂಡ ಅಗತ್ಯ ಎಂದ ಅವರು ಸಾಹಸದ ಗುಣ ರಾಮಕ್ಷತ್ರೀಯರ ರಕ್ತದಲ್ಲಿಯೇ ಇದೆ, ಇಂತಹ ಕ್ರೀಡೋತ್ಸವದಂತಹ ಕಾರ್ಯಕ್ರಮಗಳ‍ಲ್ಲಿ ಭಾಗವಹಿಸುವುದರಿಂದ ಸಮಾಜದ ಪರಿಚಯವಾಗುತ್ತದೆ, ಇದು ವೈಯುಕ್ತಿಕ ಬೆಳವಣಿಗೆಗೂ ಸಮಾಜದ ಸಂಘಟನೆಗೂ ಕಾರಣವಾಗುತ್ತದೆ. ಆದ್ದರಿಂದ ಮುಖ್ಯವಾಗಿ ಯುವಕರು ಹೆಚ್ಚೆಚ್ಚು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.

ರಾಮಕ್ಷತ್ರಿಯ ಯುವಕ ಮಂಡಲದ 60ನೇ ವರ್ಷದ ಗಣೇಶೋತ್ಸವ ಸಮಾರಂಭದ ಪ್ರಯುಕ್ತ ಜರುಗಿದ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು

ಕ್ರೀಡಾಕೂಟವನ್ನು ಉದ್ಯಮಿ ಎಕನಾಥ್‌ ಬೋಳಾರ್‌ ಉದ್ಘಾಟಿಸಿ ಶುಭ ಹಾರೈಸಿದರು ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಲಕ್ಷ್ಮೀಶ ಹವಲ್ದಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು

ಸಮಾರಂಭದಲ್ಲಿ ನಿವ್ರತ್ತ ಎಲ್‌ ಐ ಸಿ ಅಧಿಕಾರಿಗಳಾದ ಎಸ್‌ ಮಂಜುನಾಥ್‌ ನಾಯಕ್‌ ರಾಮಕ್ಷತ್ರಿಯ ಯುವಕ ಮಂಡಳಿ ಅಧ್ಯಕ್ಷ ರಾಜೇಶ್ ರಾವ್ ಕಾರ್ಯದರ್ಶಿ ಯು ಕೆ ಅನಿಲ್ ಕುಮಾರ್ ಗೌರವ ಅಧ್ಯಕ್ಷ ಪ್ರಭಾಕರ್ ಎನ್‌ ನಿಯೋಜಿತ ಅಧ್ಯಕ್ಷರಾದ ನಾಗರಾಜ್‌ ದಫೇದಾರ್‌ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಸುಮತಿ ಪ್ರಕಾಶ್ ರಾವ್‌ ಕ್ರೀಡಾ ಕಾರ್ಯದರ್ಶಿ ರಾಮು ಹೆಗ್ಡೆ ಖಜಾಂಚಿ ಸುರೇಶ್‌ ಕೆಳಮನೆ ಉಪಸ್ಥಿತರಿದ್ದರು

ಮಧುಕರ್‌ ಕೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಜೇಶ್‌ ಪಡುಕೆರೆ ಸ್ವಾಗತಿಸಿ ರಾಮು ಹೆಗ್ಡೆ ಧನ್ಯವಾದವಿತ್ತರು

ಕೂಮಾರಿ ಪೂರ್ವಿ ಮತ್ತು ತಂಡ ಕ್ರೀಡಾ ಜ್ಯೋತಿಯನ್ನು ನಗರದ ರಾಮಮಂದಿರದಿಂದ ಜೂನಿಯರ್‌ ಕಾಲೇಜು ಮೈದಾನಕ್ಕೆ ತಂದು ಗಣ್ಯರಿಗೆ ಹಸ್ತಾಂತರಿಸುವ ಮೂಲಕ ಕ್ರೀಡೆಗಳಿಗೆ ಚಾಲನೆ ನೀಡಲಾಯಿತು

 

Related Articles

error: Content is protected !!