ಕುಂದಾಪುರ : ನಗರದ ರಾಮಕ್ಷತ್ರಿಯ ಯುವಕ ಮಂಡಳಿಯು ತನ್ನ 60ನೇ ವರ್ಷದ ಗಣೇಶೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ವಜ್ರ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕುಂದಾಪುರದ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಬಿಡುಗಡೆಗೊಳಿಸಲಾಯಿತು
ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ರಾಮಕ್ಷತ್ರಿಯರ ಸಂಘದ ಅಧ್ಯಕ್ಷರಾದ ಕೆ. ಲಕ್ಷ್ಮೀಶ ಹವಾಲ್ದಾರ್ ವಹಿಸಿದ್ದರು ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಪಡುಕೇರಿ ಮಾತನಾಡಿ ವಜ್ರ ಮಹೋತ್ಸವದ ಸಮಾರಂಭವು 5 ದಿನಗಳ ಕಾಲ ಜರುಗಲಿದ್ದು ವಿವಿಧ ಧಾರ್ಮಿಕ ಸಾಂಸ್ಕ್ರತಿಕ ಹಾಗೂ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು
ರಾಮಕ್ಷತ್ರಿಯ ಮಹಿಳಾ ಮಂಡಳಿಯ ಅಧ್ಯಕ್ಷೆಯಾದ ಶ್ರೀಮತಿ ಸರೋಜಾ ಅರುಣ್ ಕುಮಾರ್ ಹಾಗೂ ರಾಮಕ್ಷತ್ರಿಯ ಯುವಕ ಮಂಡಳಯ ನಿರೋಜಿತ ಅಧ್ಯಕ್ಷರಾದ ನಾಗರಾಜ್ ದಫೇದಾರ್ ಹಿರಿಯ ಸದಸ್ಯರಾದ ಕೆ ಆರ್ ಉಮೇಶ್ ರಾವ್, ರಾಮದಾಸ್ ನಾಯ್ಕ್ ಭಾಸ್ಕರ್ ಕೆ ವಿ ಕಾರ್ಯದರ್ಶಿ ಅನಿಲ್ ಕುಮಾರ್ ಖಜಾಂಚಿ ಸುರೇಶ್ ಕೆಳಕೇರಿ ಕ್ರೀಡಾ ಕಾರ್ಯದರ್ಶಿ ಶ್ರೀರಾಮ್ ಹೆಗ್ಡೆ ಉಪಸ್ಥಿತರಿದ್ದರು
ಮಧುಸೂದನ್ ಕೆ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿಯ ಅಧ್ಯಕ್ಷರಾದ ರಾಜೇಶ್ ಪಡುಕೇರಿ ಸ್ವಾಗತಿಸಿ ಶ್ರೀಮತಿ ರಶ್ಮಿರಾಜ್ ಪ್ರಾರ್ಥಿಸಿ ಅನಿಲ್ ಕುಮಾರ್ ಧನ್ಯವಾದವಿತ್ತರು

