Home » ಛದ್ಮ ವೇಷ ಸ್ಪರ್ಧೆ
 

ಛದ್ಮ ವೇಷ ಸ್ಪರ್ಧೆ

ಜಿಲ್ಲಾಮಹಿಳಾ ಮೋರ್ಚಾ ವತಿಯಿಂದ ರಾಣಿ ಅಬ್ಬಕ್ಕ ದೇವಿಯವರ 500ನೇ ಜಯಂತಿ ಆಚರಣೆ

by Kundapur Xpress
Spread the love

ಪ್ರಧಾನಿ ನರೇಂದ್ರ ಮೋದೀಜಿ ಯವರ 75 ನೇ ಜನುಮದಿನದ ಪ್ರಯುಕ್ತ ದೇಶದಾದ್ಯoತ ನಡೆಯುತ್ತಿರುವ ಸೇವಾ ಪಾಕ್ಷಿಕ ಕಾರ್ಯಕ್ರಮದ ಭಾಗವಾಗಿ ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಭಾರತದ ಪ್ರಥಮ ಮಹಿಳಾ ಹೋರಾಟಗಾರ್ತಿ ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಯವರ 500 ನೇ ಜಯಂತಿಯ ಸವಿನೆನಪಿಗಾಗಿ, ಮಹಿಳೆಯರಿಗೆ ರಾಣಿ ಅಬ್ಬಕ್ಕ ದೇವಿಯವರ ಬಗ್ಗೆ ಛದ್ಮ ವೇಷ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ಸಂದ್ಯಾ ರಮೇಶ್ ರವರು ವಹಿಸಿ ಕೊಂಡಿದ್ದರು.. ಪ್ರಾರ್ಥನೆ ಯನ್ನು ಶ್ರೀಮತಿ ಸುಜಲಾ ಸುವರ್ಣ ರವರು ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪಕ್ಷದ ಹಿರಿಯ ಕಾರ್ಯಕರ್ತೆ ರಂಗ ಕಲಾವಿದೆ ಮತ್ತು ಹಾಸ್ಯ ನಟಿ ಯಾಗಿರುವ ಶ್ರೀಮತಿ ಸಂದ್ಯಾ shenoy ಯವರು ಮಾಡಿ ರಾಣಿ ಅಬ್ಬಕ್ಕ ದೇವಿಯವರ ಜೀವನ ಚರಿತ್ರೆ ಹಾಗೂ ಸ್ವಾತಂತ್ಯಕ್ಕಾಗಿ ಅವರು ಮಾಡಿದ ಹೋರಾಟ ಮತ್ತು ಬಲಿದಾನದ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಹಿರಿಯ ಕಾರ್ಯಕರ್ತರಾದ ಶ್ರೀಮತಿ ಸಾವಿತ್ರಮ್ಮ, ಶ್ರೀಮತಿ ವಸಂತಿ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಷ್ಮಾ ಉದಯ ಶೆಟ್ಟಿ, ಜಿಲ್ಲಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ನಳಿನಿ ಪ್ರದೀಪ್ ಮುಂತಾದವರು ಉಪಸ್ಥಿತರಿದ್ದರು. ನಂತರ ಛದ್ಮ ವೇಷ ಸ್ಪರ್ಧೆಗಳು ಜರಗಿದವು

ಶ್ರೀಮತಿ ಸಂದ್ಯಾ ರಮೇಶ್ ರವರು ಪ್ರಾಸ್ತವಿಕ ಮಾತಾಡಿ ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಶ್ರೀಮತಿ ನಿರ್ಮಲಾ ಶೆಟ್ಟಿ ಯವರು ಧನ್ಯವಾದ ವನ್ನೀತ್ತರು.ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಲಾದ ಶ್ರೀಮತಿ ಕವಿತಾ ಹರೀಶ್, ಶ್ರೀಮತಿ ನಾಗವೇಣಿ, ಶ್ರೀಮತಿ ದಯಾಶಿನಿ, ಶ್ರೀಮತಿ ಸುಮಾ ಪೆರಂಪಳ್ಳಿ ಯವರು ಕಾರ್ಯಕ್ರಮದಲ್ಲಿ ಸಹಕರಿಸಿದರು.ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶ್ರೀಮತಿ ಪವಿತ್ರ ಶೆಟ್ಟಿ ಯವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

 

Related Articles

error: Content is protected !!