103
ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ಸೌತ್ ಮತ್ತು ಇನ್ನರ್ ವೀಲ್ ಕ್ಲಬ್ ಆಫ್ ಕುಂದಾಪುರ ಸೌತ್, ಉಪವಿಭಾಗ ಸರಕಾರಿ ಆಸತ್ರೆಯ ಸಹಯೋಗದಲ್ಲಿ ಕುಂದಾಪುರದಲ್ಲಿ ಪೋಷಣಾ ಹೀನತೆ ಮತ್ತು ಹೆಚ್ಚಿನ ಅಪಾಯದ ಗರ್ಭಧಾರಣೆಯ ಅರಿವು ಮೂಡಿಸುವ ಶಿಬಿರ ಆಯೋಜಿಸಿತು.
ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಹಾಗೂ ಗೈನಕಾಲಜಿಸ್ಟ್ ಡಾ| ಚಂದ್ರ ಮರಕಾಲ, ಮುಟ್ಟು ಗರ್ಭಪೂರ್ವ ಆರೈಕೆ ಬಗ್ಗೆ ಅರಿವು ಮೂಡಿಸಿದರು. 50 ಗರ್ಭಿಣಿ ಮಹಿಳೆಯರಿಗೆ ಪ್ರೋಟೀನ್ ಪೌಡರ್ ವಿತರಿಸಲಾಯಿತು. ರೋಟರಿ ಜೋನಲ್ ಕೋರ್ಡಿನೇಟರ್ ಬಿ.ಎಂ. ಚಂದ್ರಶೇಖರ್ ಮಾತನಾಡಿದರು.
‘ಇನ್ನರ್ ವೀಲ್ ಅಧ್ಯಕ್ಷೆ ಸುಜಾತಾ ನಕ್ಕತಾಯ, ಸುರೇಶ್ ಮಲ್ಲ, ಕಾರ್ಯದರ್ಶಿ ಜೆರಾಲ್ಡ್ ಕ್ರಾಸ್ಟಾ ನಂದಾ ನಾಯಕ್, ಪುರಾಣಿಕ್ ಸುರೇಖಾ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕುಂದಾಪುರ ಸೌತ್ ಅಧ್ಯಕ್ಷ ಸಚಿನ್ ನಕ್ಕತಾಯ ಸ್ವಾಗತಿಸಿ, ಇನ್ನರ್ ವೀಲ್ ಕಾರ್ಯದರ್ಶಿ ಉತ್ತಕಲ ಶೆಟ್ಟಿ ವಂದಿಸಿದರು.

