Home » ನೀರಿನ ಫಿಲ್ಟರ್ ಹಾಗೂ ಡಿಸ್ಪೆನ್ಸರ್ ಯುನಿಟ್ ಕೊಡುಗೆ
 

ನೀರಿನ ಫಿಲ್ಟರ್ ಹಾಗೂ ಡಿಸ್ಪೆನ್ಸರ್ ಯುನಿಟ್ ಕೊಡುಗೆ

by Kundapur Xpress
Spread the love

ಕುಂದಾಪುರ : ರೋಟರಿ ಕ್ಲಬ್ ಕುಂದಾಪುರ ಸೌತ್, ಇಮೇಜ್ ಸೈನರ್ಜಿ ಎಕ್ಸ್‌ಪ್ಲೋರ್ ಪ್ರೈವೇಟ್ ಲಿಮಿಟೆಡ್ ಅವರ ಸಹಯೋಗದಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಡ್ಡೇಕೇರಿ – ಅಗುಂಬೆ ಇವರಿಗೆ ನೀರಿನ ಫಿಲ್ಟರ್ ಹಾಗೂ ಡಿಸ್ಪೆನ್ಸರ್ ಯುನಿಟ್ ಕೊಡುಗೆಯಾಗಿ ನೀಡಲಾಯಿತು

ಕ್ಲಬ್ ಅಧ್ಯಕ್ಷ ರೋಟೇರಿಯನ್ ಸಚಿನ್ ನಕ್ಕತಾಯ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ರೋಟರಿಯ ಸಮಾಜಸೇವಾ ಕಾರ್ಯಗಳ ಮಹತ್ವವನ್ನು ತಿಳಿಸಿದರು. ರೋಟೇರಿಯನ್ ರಮಾನಂದ ಕಾರಂತ್ ಅವರು ಶಿಕ್ಷಣ ಮತ್ತು ಸಮಾಜದ ಮೌಲ್ಯಗಳ ಕುರಿತು ಉಲ್ಲೇಖಿಸಿದರು.

ಈ ಕಾರ್ಯಕ್ರಮದಲ್ಲಿ ರೋಟೇರಿಯನ್ ಸುರೇಶ್ ಮಾಲ್ಯ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀ ಜಯಶಂಕರ್, ಹಳೆ ವಿದ್ಯಾರ್ಥಿ ಶ್ರೀ ಆದರ್ಶ ಹಾಗೂ ಫಿಲ್ಟರ್ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ ರೋಟೇರಿಯನ್ ಶ್ರೀಹರಿ ಚಾತ್ರ ಉಪಸ್ಥಿತರಿದ್ದರು.

ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಅನುಪಮ ಅವರು ಕಾರ್ಯಕ್ರಮವನ್ನು  ನಿರ್ವಹಿಸಿದರು

 

Related Articles

error: Content is protected !!