113
ಇಂದು ಪುರಸಭಾ ವ್ಯಾಪ್ತಿಯ ಮೀನು ಮಾರ್ಕೆಟ್, ರಸ್ತೆ ವಾರ್ಡಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕವನ್ನು ಗಳಿಸಿದ ದಿನೇಶ್ ಮತ್ತು ಹೇಮಾ ಪೂಜಾರಿ ಅವರ ಮಗ ಅಕ್ಷರ್ ಪೂಜಾರಿ ಹಾಗೂ ಗಣಪತಿ ಮತ್ತು ಶೈಲ ಶೇರಿಗಾರ್ ರವರ ಮಗ ಅನಿಷ್ ಶೇರಿಗಾರ್ ಮತ್ತು ಪ್ರಭಾಕರ್ ಮತ್ತು ಪ್ರತಿಮಾ ಗಾಣಿಗ ರವರ ಮಗ) ಆರ್ಯನ್ ಗಾಣಿಗರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ನಗರ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಪುರಸಭೆ ಸದಸ್ಯರಾದ ಶ್ರೀಧರ್ ಶೇರಿಗಾರ್ ,ಶಶಿಧರ್ ಪೂಜಾರಿ, ಶ್ರೀ ಕುಂದೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ವಿಠಲ್ ಕಾಂಚನ್ ಮತ್ತು ಬೂತ್ ಅಧ್ಯಕ್ಷರಾದ ಅರುಣ್ ಪಟೇಲ್ ಉಪಸ್ಥಿತರಿದ್ದರು.

