ಕೋಟ : ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಆಸರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಾಲ್ಕನೇ ವರ್ಷದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಡಾ|| ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರಕ್ಕೆ ಅರ್ಜಿಯನ್ನು ಕರೆಯಲಾಗಿದೆ.
2024-25 ನೇ ಸಾಲಿನಲ್ಲಿ ತಾವು ಮಾಡಿದ ಸಾಹಿತ್ಯಿಕ, ಸಾಂಸ್ಕೃತಿಕ ಅಥವಾ ಯಾವುದೇ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ವರ್ಷಕ್ಕೆ ಮೇಲ್ಪಟ್ಟ ವಯೋವರ್ಗದ ಮಹಿಳೆಯರು ಇದಕ್ಕೆ ನೇರವಾಗಿ ಅವರೇ ಅರ್ಜಿ ಸಲ್ಲಿಸಬಹುದು. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಫೆ. 28ರ ಒಳಗೆ ಡಾ|| ಶಿವರಾಮ ಕಾರಂತ ಥೀಮ್ ಪಾರ್ಕ್ ಕಛೇರಿಯಲ್ಲಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು ಹಾಗೂ ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಶೈಲಜಾ ಕೆ. ಎನ್( 9663750499) ರವರನ್ನು ಸಂಪರ್ಕಿಸಬೇಕೆAದು ಡಾ|| ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್, ಅಧ್ಯಕ್ಷ ಸತೀಶ್ ಕೆ. ಕುಂದರ್ ಬಾರಿಕೆರೆ, ಕಾರ್ಯದರ್ಶಿಗಳಾದ ನರೇಂದ್ರ ಕುಮಾರ್ ಕೋಟ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರವೀಂದ್ರ ರಾವ್, ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

