.ಕಾರ್ಕಳ : ನವೆಂಬರ್ 11 ಶನಿವಾರದಿಂದ ನವೆಂಬರ್ 14 ಮಂಗಳವಾರದವರೆಗೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಹಿನ್ನಲೆಯಲ್ಲಿ ರಾಜ್ಯ ಸಹಕಾರ ಭಾರತಿ ಹಾಲು ಪ್ರಕೋಷ್ಟದ ನೇತೃತ್ವದಲ್ಲಿ ಈ ಕೆಳಗಿನಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ನಾಯಕ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ
ಗಾವೋ ವಿಶ್ವಸ್ಯ ಮಾತರಃ
- ” ಸಾಮೂಹಿಕ ಗೋ ಪೂಜಾ ಕಾರ್ಯಕ್ರಮ” ರಾಜ್ಯದ ಎಲ್ಲಾ ಹಾಲು ಉತ್ಪಾದಕರ ಸಂಘಗಳ ಆವರಣದಲ್ಲಿ ” ಸಾಮೂಹಿಕ ಗೋಪೂಜೆ”
- “ಗೋ ಸೇವಾ ಅಭಿಯಾನ” ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಮತ್ತು ಹಾಲು ಪ್ರಕೋಷ್ಟದ ಸಂಚಾಲಕರು ಸಹ ಸಂಚಾಲಕರು ಮತ್ತು ಸದಸ್ಯರು ಹತ್ತಿರದ ಗೋಶಾಲೆಗೆ ಭೇಟಿ ನೀಡಿ ” ಸಾಮೂಹಿಕ ಗೋಪೂಜೆ_ ಗೋಗ್ರಾಸ ಸೇವೆಯನ್ನು ಗೋವುಗಳಿಗೆ ಹಸಿರು ಮೇವು ಪಶು ಆಹಾರ (ಹಿಂಡಿ) ಸಹಕಾರಿ ಸಂಸ್ಥೆಗಳ ದಾನ ಧರ್ಮದ ನಿಧಿಯಿಂದ ದೇಣಿಗೆ ನೀಡಬಹುದು.
- ” ಗೋವಿಗಾಗಿ ಮೇವು” ಗೋ ಸೇವೆಯಲ್ಲಿ ನಿರತರಾಗಿರುವ ಸ್ಥಳೀಯ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗೋವಿಗಾಗಿ ಮೇವು ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದು ರಸ್ತೆ ಬದಿಯಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ಕತ್ತರಿಸಿ ಗೋಶಾಲೆಗಳಿಗೆ ನೀಡಬಹುದು
4.” ಕೃಷಿತೋ ನಾಸ್ತಿ ದುರ್ಭಿಕ್ಷಂ” ನವೆಂಬರ್ 14 ಮಂಗಳವಾರ ದೀಪಾವಳಿಯ ಕೊನೆಯ ದಿನ ಹಾಗೂ ಸಹಕಾರಿ ಸಪ್ತಾಹದ ಆರಂಭದ ದಿನ.ಸಹಕಾರಿ ಸಪ್ತಾಹ ಆಚರಣೆಯ ಪ್ರಾರಂಭೋತ್ಸವದಂದು (ನವೆಂಬರ್ 14) ಸ್ಥಳೀಯವಾಗಿ ಗೋ ಸೇವೆಯಲ್ಲಿ ತೊಡಗಿಕೊಂಡಿರುವವರು ಮತ್ತು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವವರಿಗೆ ಅವರ ಮನೆಗೆ ಅಥವಾ ಕೃಷಿ ಹೈನುಗಾರಿಕಾ ಕ್ಷೇತ್ರಕ್ಕೆ ಹೋಗಿ ಸಹಕಾರಿ ಸಾಧಕ ಗೌರವ ಪುರಸ್ಕಾರ” ನೀಡಬಹುದು ಸಹಕಾರ ಭಾರತಿಯ ತಾಲೂಕು ಸಮಿತಿಗಳ ಮೂಲಕವೂ ಈ ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನು ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಎಂದು ಸಾಣೂರು ನರಸಿಂಹ ಕಾಮತ್ ತಿಳಿಸಿದ್ದಾರೆ