ಕುಂದಾಪುರ : ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ವಾರ್ಷಿಕ ರಥೋತ್ಸವವು ವಿವಿಧ ದಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು. ಸಂಜೆ ಓಲಗ ಮಂಟಪ ಸೇವೆ ಅಷ್ಟಾವಧಾನ ಸೇವೆ ಸಂಗೀತ ಕಾರ್ಯಕ್ರಮ ಮಹಾಮಂಗಳಾರತಿ ಭೂತ ಬಲಿ ಶಯನೋತ್ಸವ ನಡೆಯಿತು. ಅಪರಾಹ್ನ ಅನ್ನಸಂತರ್ಪಣೆ, ಪೂರ್ವಾಹ್ನ ಪಾನಕ ಪನಿವಾರ ಸೇವೆ ಇತ್ಯಾದಿಗಳು ನೆರವೇರಿದವು
ದೇಗುಲ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ. ಎಸ್.ಕಾರಂತ್ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇಗುಲದ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿ ಕೋಶಾಧಿಕಾರಿ ಸದಸ್ಯರು ಅರ್ಚಕರು ಉಪಸ್ಥಿತರಿದ್ದರು