ಕೋಟ: ದೇಶವ್ಯಾಪಿ ಇರುವ ಸಂಜೀವಿನಿ ಸ್ವಸಹಾಯ ಸಂಘಗಳಿಗೆ ನೀಡಲಾಗುತ್ತಿರುವ ಸಾಲದ ಪ್ರಮಾಣವನ್ನು ಹೆಚ್ಚಿಸುವಂತೆ ಅಲ್ಲದೆ ಅದರ ಬಡ್ಡಿ ಪ್ರಮಾಣವನ್ನು ಶೇ.3ರಂತೆ ವಿತರಿಸವಂತೆ ಸಾಸ್ತಾನದ ಪಾಂಡೇಶ್ವರ ಗ್ರಾಮಪಂಚಾಯತ್ ವ್ಯಾಪ್ತಿಯ ಕಲ್ಪತರು ಸ್ವಸಹಾಯ ಗುಂಪಿನ ಸಂಯೋಜಕ ಸುರೇಶ್ ಪೂಜಾರಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಒತ್ತಾಯಿಸಿ ಭಾನುವಾರ ಮನವಿ ನೀಡಿದರು.
ಸಾಸ್ತಾನದಲ್ಲಿ ಸಾರ್ವಜನಿಕ ಅಭಿನಂದನೆ ಸ್ವೀಕರಿಸುವ ಸಲುವಾಗಿ ಸಂಸದರು ಆಗಮಿಸಿದ ಸಂದರ್ಭದಲ್ಲಿ ಕಲ್ಪತರು ಸ್ವಸಹಾಯ ಸಂಘಗಳ ಮಹಿಳೆಯರ ಸಹಿತ ಮನವಿ ನೀಡಿ ಮಹಿಳೆಯರ ಆರ್ಥಿಕ ಬಲವರ್ಧನೆಗೆ ಗುಂಪು ಸಾಲ ಸಹಕಾರಿಯಾಗಿದೆ ದೇಶವ್ಯಾಪಿ ಇರುವ ಸಂಜೀವಿನಿ ಸಂಘಗಳಿಗೆ ಇದರಿಂದ ಅನುಕೂಲಕರ ವಾತಾವರಣ ಸೃಷ್ಠಿಯಾಗಲಿದೆ ಎಂದರು ಈ ವೇಳೆ ಸಂಸದರು ಸ್ಪಂದಿಸಿದ್ದು ಶೀಘ್ರ ಪ್ರಧಾನಮಂತ್ರಿಗಳೊಂದಿಗೆ ಈ ವಿಚಾರ ಚರ್ಚಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಕಲ್ಪತರು ಸ್ವಸಹಾಯ ಗುಂಪಿನ ಪ್ರಮುಖರಾದ ಉಷಾ ಗಣೇಶ್ ಪೂಜಾರಿ ,ಇಂದಿರಾ ರವಿಕಿರಣ್ ಪೂಜಾರಿ ,ಸೀಮಾ ವಿಜಯ ಪೂಜಾರಿ ,ಲೀಲಾವತಿ ಗಂಗಾಧರ ಪೂಜಾರಿ ,ವಾರಿಜ ಕೊರಗಪ್ಪ ಸುವರ್ಣ ,ಪೂರ್ಣಿಮ ಸುರೇಶ ಪೂಜಾರಿ ,ಮೋಹಿನಿ ಬಸವ ಪೂಜಾರಿ ,ರಾಧಾ ಗೋವಿಂದ ಪೂಜಾರಿ ಮತ್ತಿತರರು ಇದ್ದರು.