ಸತ್ಯಜಿತ್ ಸುರತ್ಕಲ್ ಹತ್ಯೆಗೆ ಬಿಜೆಪಿ ಮುಖಂಡರಿಂದಲೇ ಪರೋಕ್ಷ ಸಂಚು…?
ಕುಂದಾಪುರ : ಹಿಂದು ಸಮಾಜದ ಮುಖಂಡನಾಗಿ ನಾನಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಿಂದು ಸಮಾಜಕ್ಕೆ ಬಂದೊರಗಿದ ಬಾಹ್ಯ ಆಕ್ರಮಣವನ್ನು ತಡೆಗಟ್ಟುವಲ್ಲಿ 25 ವರ್ಷಗಳ ಕಾಲ ನಿರಂತರ ಹೋರಾಟ ಮಾಡಿದ ಸತ್ಯಜಿತ್ ಸುರತ್ಕಲ್ ರವರಿಗೆ ಮುಸ್ಲಿಂ ಮೂಲಭೂತವಾದಿಗಳ ಜೀವ ಬೆದರಿಕೆಯಿಂದಾಗಿ ಕಳೆದ 16 ವರ್ಷಗಳಿಂದ ಇವರಿಗೆ ನೀಡಿದ ಗನ್ ಮ್ಯಾನ್ ಭದ್ರತೆಯನ್ನು ಕರ್ನಾಟಕದ ಬಿಜೆಪಿ ಸರಕಾರ ತರಾತುರಿಯಲ್ಲಿ ಹಿಂದೆ ಪಡೆದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದ್ದು ಬಿಜೆಪಿಯ ಮುಖಂಡರೇ ಇವರ ಹತ್ಯೆಗೆ ಪರೋಕ್ಷವಾಗಿ ಸಂಚು ರೂಪಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ
ಕಳೆದ 16 ವರ್ಷಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಅನೇಕ ಸರಕಾರಗಳು ಆಡಳಿತ ನಡೆಸಿದ್ದು ಯಾವ ಸರಕಾರವೂ ಕೂಡ ಗನ್ ಮ್ಯಾನ್ ಭದ್ರತೆಯನ್ನು ವಾಪಾಸು ಪಡೆಯದೇ ಇದ್ದು ಇದೀಗ ಬಿಜೆಪಿ ಸರಕಾರವೇ ಚುನಾವಣಾ ಸಂದರ್ಭದಲ್ಲಿ ಭದ್ರತೆಯನ್ನು ವಾಪಾಸ್ಸು ಪಡೆಯುದರ ಔಚಿತ್ಯವೇನೆಂದು ಹಿಂದು ಸಮಾಜದ ಹಲವು ಮುಖಂಡರು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ
ತನ್ನ ಜೀವದ ಹಂಗನ್ನು ತೊರೆದು ಹಿಂದು ಸಮಾಜದ ಮೇಲೆ ಆಗುತ್ತಿರುವ ಬಾಹ್ಯ ಆಕ್ರಮಣವನ್ನು ತಡೆಯುವ ನಿಟ್ಟಿನ ಹೋರಾಟದಲ್ಲಿ ಕಾರಾಗೃಹ ವಾಸವನ್ನು ಅನುಭವಿಸಿರುವ ಇವರು ಬಿಜೆಪಿಗೆ ಮಗ್ಗುಲ ಮುಳ್ಳಾಗಿದ್ದಾರೆಯೇ….?
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬೆರಳಣಿಕೆ ಶಾಸಕರು ಹಾಗೂ ವಿರೋಧ ಪಕ್ಷದಲ್ಲಿಯೂ ಇಲ್ಲದ ಬಿಜೆಪಿಯ ಕಾಲದಲ್ಲಿ ಮಂಗಳೂರಿನಿಂದ ಹಿಡಿದು ಬೈಂದೂರಿನ ತನಕ ತನ್ನ ಸ್ವಂತ ಖರ್ಚಿನಲ್ಲಿ ಪ್ರವಾಸ ಮಾಡಿ ಹಿಂದು ಜಾಗರಣಾ ವೇದಿಕೆಯ ಮೂಲಕ ಕಾರ್ಯಕರ್ತರನ್ನು ತಯಾರು ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಈಗಲೂ ಕೂಡ ಬೈಂದೂರು ಕಿರಿಮಂಜೇಶ್ವರ ಮರವಂತೆ ಗಂಗೊಳ್ಳಿಯಿಂದ ಹಿಡಿದು ಕುಂದಾಪುರದಿಂದ ಉಡುಪಿ ಕಾರ್ಕಳ ಮಂಗಳೂರಿನ ವರೆಗೆ ತನ್ನದೇ ಆದ ವಿಶಿಷ್ಟ ವರ್ಚಸ್ಸಿನಿಂದ ಅಭಿಮಾನಿ ಬಳಗವನ್ನೇ ಹೊಂದಿದ್ದು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಪೋಲೀಸರ ಸರ್ಪಗಾವಲಿನ ನಡುವೆ ರಾಷ್ಟ್ರಧ್ವಜವನ್ನು ಹಾರಿಸಿ ಕರ್ನಾಟಕದ ಮಾನ ಕಾಪಾಡಿದ ಇವರು ಹಲವರಿಗೆ ಪ್ರೇರಣಾದಾಯಿಯಾಗಿದ್ದಾರೆ
ಸದ್ಯ ಸತ್ಯಜಿತ್ ಸುರತ್ಕಲ್ ರವರು ನಾರಾಯಣ ಗುರು ವಿಚಾರ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿರುವುದು ಬಿಜೆಪಿಯ ನಾಯಕರಿಗೆ ನುಂಗಲಾರದ ತುತ್ತಾಗಿದ್ದು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಇವರನ್ನೇ ಬಲಿ ಕೊಡುವ ಹುನ್ನಾರ ನಡೆಸಿರುವುದು ಹಿಂದು ಸಮಾಜದ ದುರಂತವೇ ಸರಿ… ?
1980ರ ದಶಕದಲ್ಲಿ ಸಂಘದ ಸ್ವಯಂ ಸೇವಕನಾಗಿ ಸೋಂದಾ ನಾರಾಯಣ ಭಟ್ ಪ್ರಚಾರಕರಾದ ಮಾನ್ಯ ಸುರೇಶ್ ಜಿ ಹಾಗೂ ದಾ ಮಾ ರವೀಂದ್ರ ಮತ್ತು ಮುಕುಂದ್ ಜಿ ಡಾ.ಕಲ್ಲಡ್ಕ ಪ್ರಭಾಕರ ಭಟ್ ಯವರ ಸೂಚನೆಯಂತೆ ನಿಷ್ಟೆಯಿಂದ ಸಮಾಜಕ್ಕಾಗಿ ಸೇವೆ ಸಲ್ಲಿಸಿದ ಇವರಿಗೆ ಪರಿವಾರದ ಕಾಣಿಕೆ ಇದೆಯೇ….?
ಸತ್ಯಜಿತ್ ರವರ ಸದ್ದಡಗಿಸಲಿಕ್ಕಾಗಿ ಬಿಜೆಪಿಯ ಈ ಧೋರಣೆಯಿಂದ ಅವರ ಜೀವಕ್ಕೇನಾದರೂ ಮೂಲಭೂತವಾದಿಗಳಿಂದ ಕುತ್ತು ಬಂದಲ್ಲಿ ಹಿಂದು ಸಮಾಜವು ಬಿಜೆಪಿಯನ್ನು ಎಂದಿಗೂ ಕ್ಷಮಿಸುವುದಿಲ್ಲ…………… ನೆನಪಿರಲಿ