ಕುಂದಾಪುರ : ಮತ್ತ್ವ ಸಮೃದ್ಧಿ ಉಂಟಾಗಲಿ, ಮೀನುಗಾರಿಕೆಗೆ ತೆರಳಿದಾಗ ಯಾವುದೇ ಅಡ್ಡಿ ಆತಂಕಗಳು ಎದುರಾಗದಿರಲಿ, ಸುರಕ್ಷಿತಾ ಹಾಗೂ ಉತ್ತಮ ಮೀನುಗಾರಿಕಾ ಋತುವಾಗಿರಲಿ, ಮೀನುಗಾರರಲ್ಲಿ ಪರಸ್ಪರ ಏಕತೆ, ಸೌಹಾರ್ದತೆ ಇರುವಂತೆ ಗಂಗಾ ಮಾತೆ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಗಂಗೊಳ್ಳಿಯಲ್ಲಿ ಮೀನುಗಾರರು ಬುಧವಾರ ಸಮುದ್ರಪೂಜೆ ನೆರವೇರಿಸಿದರು.
ಗಂಗೊಳ್ಳಿಯ ಆರ್ಚಕ ಜಿ. ವಿಟ್ಟಲ್ ದಾಸ್ ಭಟ್ ಹಾಗೂ ಅಜಿತ್ ಭಟ್ ನೇತೃತ್ವದಲ್ಲಿ ಸಮುದ್ರ ಪೂಜೆಯ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಬಳಿಕ ಪರ್ಸಿನ್ ಬೋಟ್, ತ್ರಿಸೆವೆಂಟಿ ಬೋಟ್ ಹಾಗೂ ಟ್ರಾಲರ್ ಬೋಟ್ಗಳ ಸಂಘದ ಸದಸ್ಯರೆಲ್ಲ ಸಮುದ್ರರಾಜನಿಗೆ ಹಾಲು, ಸೀಯಾಳ, ಫಲಪುಷ್ಪವನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪರ್ಸಿನ್ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಪ್ರಭಾಕರ ಕುಂದರ್, ತ್ರಿಸೆವೆಂಟಿ ಬೋಟುಗಳ ಮೀನುಗಾರರ ಸಂಘದ ಅಧ್ಯಕ್ಷ ಸೌಪರ್ಣಿಕಾ ಬಸವ ಖಾರ್ವಿ, ಟ್ರಾಲ್ಬೋಟ್ ಮೀನುಗಾರರ ಸಂಘದ ಅಧ್ಯಕ್ಷ ಗಣೇಶ್ ಖಾರ್ವಿ, ಮೀನುಗಾರರ ಮುಖಂಡರು ಹಾಗೂ ಮೀನುಗಾರರು ಉಪಸ್ಥಿತರಿದ್ದರು.