297
ಕೋಟೇಶ್ವರ : ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯಿಂದ ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಕಲೋತ್ಸವದಲ್ಲಿ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಕುಮಾರಿ ಮಹಾಲಕ್ಷ್ಮಿ ಭರತನಾಟ್ಯ ವಿಭಾಗದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಬಹುಮುಖ ಪ್ರತಿಭಾವಂತೆಯಾದ ವಿದ್ಯಾರ್ಥಿನಿ ಮಹಾಲಕ್ಷ್ಮಿಯ ಸಾಧನೆಯನ್ನು ಸಂಸ್ಥೆಯ ಉಪ ಪ್ರಾಂಶುಪಾಲರು,ಅಧ್ಯಾಪಕ ವರ್ಗದವರು,ಎಸ್.ಡಿ.ಎಂ.ಸಿ ಸದಸ್ಯರು ಅಭಿನಂದಿಸಿದ್ದಾರೆ.ನೃತ್ಯ ವಿದುಷಿ ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ಪ್ರವಿತ ಅಶೋಕ್ ಅವರಲ್ಲಿ ನೃತ್ಯ ಅಧ್ಯಯನ ಮಾಡುತ್ತಿದ್ದಾರೆ. ಇವಳು ಎಸ್. ಜಿ. ಪ್ರಸಾದ್ ರಾವ್ ಮತ್ತು ಪೂರ್ಣಿಮಾ ಪಿ.ರಾವ್ ಅವರ ಪುತ್ರಿಯಾಗಿದ್ದಾಳೆ.

