ಬೈಂದೂರು : ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಉಪ್ಪುಂದದ ಕಛೇರಿಯಲ್ಲಿ “ಸೇವಾ ಪಾಕ್ಷಿಕ” ಅಭಿಯಾನದ “ಮಂಡಲ ಕಾರ್ಯಾಗಾರ” ಸಭೆ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷರಾದ ಅನಿತಾ ಆರ್.ಕೆ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ಮಾತನಾಡಿ ಸೇವಾ ಪಾಕ್ಷಿಕ ಸೆಪ್ಟಂಬರ್ 17ರಿಂದ ಮೋದಿಯವರ ಜನ್ಮ ದಿನದಂದು ಆರಂಭವಾಗಿ ಅಕ್ಟೋಬರ್ 2 ಗಾಂಧಿ ಜಯಂತಿಯ ತನಕ ವಿವಿಧ ಸೇವಾ ಕಾರ್ಯಕ್ರಮಗಳ ಮೂಲಕ ಬೈಂದೂರು ವಿಧಾನಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರು ವಿವಿಧ ಸೇವಾ ಕಾರ್ಯಕ್ರಮ ನಡೆಸುವರು ಎಂದರು.
ಮಂಡಲ ಅಧ್ಯಕ್ಷರಾದ ಅನಿತಾ ಆರ್ ಕೆ ಬಿಜೆಪಿ ಮಂಡಲದ ವಿವಿಧ ಸ್ತರದ ಪದಾಧಿಕಾರಿಗಳಿಗೆ ಸೇವಾ ಪಾಕ್ಷಿಕ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಈ ಕಾರ್ಯಕ್ರಮದ ಯಶಸ್ವಿಗೆ ಒಗ್ಗಟ್ಟಿನಿಂದ ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.ಜಿಲ್ಲಾ ಕಾರ್ಯದರ್ಶಿಯವರಾದ,ಸೇವಾ ಪಾಕ್ಷಿಕದ ಸಹ ಸಂಚಾಲಕರಾದ ಶ್ರೀ ಶ್ರೀಕಾಂತ್ ನಾಯಕ್, ಸೇವಾ ಪಾಕ್ಷಿಕ ಕಾರ್ಯಕ್ರಮವು ಹೇಗೆ ನಡೆಯುತ್ತದೆ ಎಂದು ವಿವರಣಾತ್ಮಕವಾಗಿ ಪದಾಧಿಕಾರಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಕರಣ್ ಪೂಜಾರಿ, ಗೋಪಾಲ್ ಪೂಜಾರಿ, ಸೇವಾ ಪಾಕ್ಷಿಕದ ಮಂಡಲ ಸಂಚಾಲಕರಾದ ಶ್ರೀ ಗಣೇಶ್ ಗಾಣಿಗ, ಶಿಲ್ಪಾ ಶೆಟ್ಟಿ, ಹಾಗೂ ಮಂಡಲದ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು .

