ತೆಕ್ಕಟ್ಟೆ : ದಿನಾಂಕ 19.08.2024 ರಂದು ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಗಳಾಗಿ ಮಾನ್ಯ ಶ್ರೀಯುತ ಪ್ರಶಾಂತ್ ಅರೆಶಿರೂರು ಇವರು ಆಗಮಿಸಿದ್ದರು. ಇವರು ಉಡುಪಿ ಜಿಲ್ಲಾ ಬೌದ್ಧಿಕ್ ಪ್ರಮುಖರು. ಪ್ರಾಸ್ತಾವಿಕ ಭಾಷಣವನ್ನು ಶಿಕ್ಷಕಿ ಕುಮಾರಿ ಅಕ್ಷತ ನೆರವೇರಿಸಿದರು. ರಕ್ಷಾಬಂಧನ ಸಂದೇಶವನ್ನು ಏಳನೇ ತರಗತಿ ವಿದ್ಯಾರ್ಥಿನಿ ಕುಮಾರಿ ಪ್ರಣಿತ ವಾಚಿಸಿದಳು. ಅತಿಥಿಗಳು ರೇಷ್ಮೆ ದಾರಗಳು ಒಟ್ಟಾಗಿ ರಕ್ಷೆಯಾದ ಹಾಗೆ ನಾವೆಲ್ಲರೂ ಒಟ್ಟಾಗಿ ಬಾಳಬೇಕು ಎಂದು ರಕ್ಷಾಬಂಧನದ ಮಹತ್ವ ತಿಳಿಸಿದರು.
ವೇದಿಕೆಯಲ್ಲಿ ಶಾಲಾ ಕಾರ್ಯದರ್ಶಿಗಳಾದ ಶ್ರೀಯುತ ಕಮಲಾಕ್ಷ ಪೈ, ಉಪಾಧ್ಯಕ್ಷರಾದ ಶ್ರೀಯುತ ಅನಂತ್ ನಾಯಕ, ತಿಥಿಗಳಾದ ಶ್ರೀಯುತ ಪ್ರಶಾಂತ್ ಅರೆ ಶಿರೂರು, ಶಾಲಾ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಸಂಧ್ಯಾ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಾಂತಿಕ ಸ್ವಾಗತಿಸಿದರೆ, ಪ್ರಣವ್ ಧನ್ಯವಾದ ಮಾಡಿದನು.